ಬೆಂಗಳೂರು : ಅಕ್ಟೋಬರ್: 20: ದೃಶ್ಯ ನ್ಯೂಸ್ : ಮಲಬಾರ್ ಗ್ರೂಪ್ ವತಿಯಿಂದ ನಿರ್ಗತಿಕ ಮಹಿಳೆಯರಿಗಾಗಿ ನಿರ್ಮಿಸಲಾಗಿರುವ ‘ಅಜ್ಜಿ ಮನೆ’ ಯೋಜನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಶುಕ್ರವಾರ ಚಾಲನೆ ನೀಡಿದರು.
ಕತ್ರಿಗುಪ್ಪೆಯಲ್ಲಿ ನಿರ್ಮಿಸಲಾಗಿರುವ ‘ಅಜ್ಜಿ ಮನೆ’ಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ದೇಶ, ವಿದೇಶಗಳಲ್ಲಿ ಚಿನ್ನಾಭರಣ ಸಂಸ್ಥೆಗಳನ್ನು ಹೊಂದಿರುವ ಮಲಬಾರ್, ಇದೀಗ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಎಲ್ಲರಿಗೂ ಮಾದರಿಯಾಗಿದೆ. ನಿರ್ಗತಿಕ ಮಹಿಳೆಯರಿಗಾಗಿ ಮಲಬಾರ್ ಅತ್ಯುತ್ತಮ ಕೆಲಸ ನಿರ್ವಹಿಸುತ್ತಿದೆ.
ಇದು ದೇವರ ಕೆಲಸ, ಸಿಎಸ್ ಆರ್ ಫಂಡ್ ಮೂಲಕ ವಿದ್ಯಾರ್ಥಿಗಳಿಗೂ ಸಂಸ್ಥೆ ಅನುಕೂಲ ಮಾಡುತ್ತಿದೆ ಎಂದು ಸಚಿವರು ತಿಳಿಸಿದರು.ಈ ವೇಳೆ ಮಲಬಾರ್ ಸಂಸ್ಥೆಯ ಚೇರ್ಮನ್ ಎಂ.ಪಿ.ಅಹಮದ್, ಎಂಡಿ ಅಶೆರ್, ಐಡ್ರೆಸ್.ವಿ, ಎ.ಕೆ.ಮೊಹಮದ್ ಮುಷ್ತಾಫ, ಕೆ.ಎಚ್.ಫಾರೂಕ್, ಫಿಲ್ಸೂರ್ ಬಾಬು ಮೊದಲಾದವರು ಉಪಸ್ಥಿತರಿದ್ದರು.