ಉಡುಪಿ :ಅಕ್ಟೋಬರ್ 20:ದ್ರಶ್ಯ ನ್ಯೂಸ್ :ಭೌಗೋಳಿಕ ಮಾನ್ಯತೆ ಪಡೆದಿರುವ ಬಹು ಬೇಡಿಕೆಯ ಕೈಮಗ್ಗದ ‘ಉಡುಪಿ ಸೀರೆ’ಗಳ ಉತ್ಪಾದನಾ ಕ್ಷೇತ್ರವನ್ನು ವಿಸ್ತರಿಸಲು 6 ತಿಂಗಳ ಕೈಮಗ್ಗದ ನೇಯ್ಗೆ ತರಬೇತಿ ಕಾರ್ಯಾಗಾರ ಅ.30ರಂದು ಉಡುಪಿಯಲ್ಲಿ ಆರಂಭವಾಗಲಿದೆ.
ಕೇವಲ 30 ಆಸಕ್ತರಿಗೆ ಮಾತ್ರ ಅವಕಾಶ. ಅ.25ಕ್ಕೆ ಮುಂಚಿತವಾಗಿ ಹೆಸರನ್ನು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದಲ್ಲಿ ನೋಂದಾಯಿಸಿ ಕೊಳ್ಳಬೇಕು.
ಮಹಿಳೆಯರು ಹಾಗೂ ಕೈಮಗ್ಗದ ನೇಕಾರಿಕೆಯ ಹಿನ್ನೆಲೆ ಹೊಂದಿರುವ ವರಿಗೆ ಆದ್ಯತೆ. ಶಿಬಿರಾರ್ಥಿಗಳಿಗೆ ಐದು ತಿಂಗಳು ಮಾಸಿಕ ತಲಾ 8,000ರೂ. ತರಬೇತಿ ವೇತನ ನೀಡಲಾಗುವುದು. ಆರು ತಿಂಗಳ ತರಬೇತಿಯ ಬಳಿಕ ಕಡ್ಡಾಯವಾಗಿ ಸ್ವಂತ ಕೈಮಗ್ಗದ ನೇಕಾರಿಕೆ ಆರಂಭಿಸಬೇಕು. ಸಕಲ ವ್ಯವಸ್ಥೆ ಮಾಡಿಕೊಡಲಾ ಗುವುದು.
ಕಾರ್ಯಾಗಾರವು ಉಡುಪಿ ಜಿಲ್ಲಾ ಪಂಚಾಯತ್, ಕೈಮಗ್ಗ ಮತ್ತು ಜವಳಿ ಇಲಾಖೆ, ನಬಾರ್ಡ್, ರೋಬೋ ಸೋಪ್ಟ್‌ನ ಸಿ.ಎಸ್.ಆರ್ ಯೋಜನೆ, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಇವರ ಸಹಭಾಗಿತ್ವದಲ್ಲಿ ಜರಗಲಿದ್ದು ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮ ಸಂಯೋಜಕ ರತ್ನಾಕರ ಇಂದ್ರಾಳಿ(ಮೊಬೈಲ್: 9844993565) ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.