ಮಂಗಳೂರು: ಅಕ್ಟೋಬರ್ 19: ದ್ರಶ್ಯ ನ್ಯೂಸ್ :ಪಣಂಬೂರು ಸಮುದ್ರ ತೀರದಲ್ಲಿ ಬೆಂಗಳೂರು ಮೂಲದ ಪುರುಷ ಮತ್ತು ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಮೃತರನ್ನು ಬೆಂಗಳೂರು ನಿವಾಸಿಗಳಾದ ಲಕ್ಷ್ಮಿ (43) ಮತ್ತು ಬೋರಲಿಂಗಯ್ಯ (50) ಎಂದು ಗುರುತಿಸಲಾಗಿದ್ದು, ಅವರಿಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇಂದು ಬೆಳಗ್ಗೆ ಸಮುದ್ರ ತೀರದಲ್ಲಿ ಇಬ್ಬರ ಮೃತ ದೇಹಗಳು ಕಂಡು ಬಂದಿದ್ದು, ಪಣಂಬೂರು ಪೊಲೀಸರ ಉಪಸ್ಥಿತಿಯಲ್ಲಿ ಸ್ಥಳೀಯ ಜೀವ ರಕ್ಷಕರ ಸಹಾಯದಿಂದ ಮೃತದೇಹಗಳನ್ನು ಸಮುದ್ರದಿಂದ ಮೆಲಕ್ಕೆತ್ತಿ ಶವಾಗಾರಕ್ಕೆ ರವಾನಿಸಲಾಯಿತು.
ಮೃತರ ಬಳಿ ಇದ್ದ ಆಧಾರ್ ಕಾರ್ಡ್ ನಿಂದ ಅವರ ಗುರುತು ಪತ್ತೆ ಹಚ್ಚಲಾಗಿದೆ. ಮೊಬೈಲ್ ಫೋನ್ ಸಮುದ್ರ ದಂಡೆಯಲ್ಲಿ ಸಿಕ್ಕಿದ್ದರಿಂದ ಪಣಂಬೂರು ಪೊಲೀಸರು ಸಂಬಂಧಿಕರನ್ನು ಸಂಪರ್ಕಿಸಿದ್ದು, ಅವರಿಬ್ಬರ ಸಾವಿನ ಸುದ್ದಿ ಕೇಳಿ ಸಂಬಂಧಿಕರು ಮಂಗಳೂರಿಗೆ ಹೊರಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇವರಿಬ್ಬರೂ ಸಂಬಂಧಿಕರಾಗಿದ್ದು, ಮನೆಯಲ್ಲಿ ಯಾರಿಗೂ ಹೇಳದೆ ಬಂದಿದ್ದರು ಎನ್ನುವ ಪ್ರಾಥಮಿಕ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇಬ್ಬರ ಮೃತ ದೇಹಗಳನ್ನು ಶವಾಗಾರದಲ್ಲಿ ಇರಿಸಲಾಗಿದೆ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ