ಉಚ್ಚಿಲ : ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಚ್ಚಿಲ ದಸರಾ ಪ್ರಯುಕ್ತ ಅ. 19 ಇಂದು ಲಲಿತಾ ಪಂಚಮಿ ಸಂಭ್ರಮ, ಸಾಮೂಹಿಕ ಕುಂಕುಮಾರ್ಚನೆ ಹಾಗೂ ಏಕಕಾಲದಲ್ಲಿ ನೂರೈವತ್ತೂಂದು ವೀಣೆಗಳ ವಾದನ ಕಾರ್ಯಕ್ರಮ ನಡೆಯಲಿದೆ.
ಇಂದು ಗುರುವಾರ ಸಂಜೆ 4.30ರಿಂದ ವಿದುಷಿ ಪವನ ಬಿ.ಆಚಾರ್ ಮಣಿಪಾಲ ಇವರ ನಿರ್ದೇಶನದಲ್ಲಿ ಏಕಕಾಲದಲ್ಲಿ ನೂರ ಐವತ್ತೂಂದು ವೀಣಾ ವಾದಕರ ಸಹಭಾಗಿತ್ವದೊಂದಿಗೆ ಶತವೀಣಾವಲ್ಲರಿ ಸಾಂಸ್ಕೃತಿಕ ಕಾರ್ಯ ಕ್ರಮ ನಡೆಯಲಿದೆ.
ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ನವದುರ್ಗೆಯರು ಮತ್ತು ಶಾರದಾ ಮಂಟಪ ಸಹಿತ ಉಚ್ಚಿಲ-
ಎರ್ಮಾಳು-ಕಾಪುವರೆಗಿನ 12 ಕಿ.ಮೀ. ಉದ್ದದವರೆಗೂ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.