ಯೂಥ್ ಫಾರ್ ಸೇವಾ ಉಡುಪಿ ಇವರ ನೇತೃತ್ವದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ಮತ್ತು ಕಡ್ತಲ ಗ್ರಾಮ ಪಂಚಾಯಿತ್ ಇವರ ಸಹಯೋಗದೊಂದಿಗೆ ಕಡ್ತಲ ಸುತ್ತಮುತ್ತಲಿನ ಗ್ರಾಮಸ್ಥರಿಗಾಗಿ ಹೊಸ ಆಧಾರ್ ಕಾರ್ಡ್ ನೋಂದಾವಣೆ, ಆಧಾರ್ ಕಾರ್ಡ್ ಪರಿಷ್ಕರಣೆ, ಹಾಗೂ ಅಂಚೆ ಇಲಾಖೆಯ ಇತರ ಸೇವೆಗಳಿಗೆ ಪಂಚಾಯತ್ ಅಧ್ಯಕ್ಷರಾದ ಸುಕೇಶ್ ಹೆಗ್ಡೆ ಅವರಿಂದ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಪುತ್ತೂರು ವಿಭಾಗದ ಅಂಚೆ ಇಲಾಖೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿರುವ ಗುರುಪ್ರಸಾದ್ ಅವರು ಕಾರ್ಯಕ್ರಮದ ಪ್ರಸ್ತಾವನೆ ಮಾಡಿ ನೇರವಾಗಿ ಜನರಿಗೆ ಅಂಚೆ ಇಲಾಖೆಯ ಸೇವೆಗಳನ್ನು ತಲುಪಿಸುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ. ಅಲ್ಲದೆ ಅಂತೆ ಇಲಾಖೆಯ ಬೇರೆ ಬೇರೆ ಸೌಲಭ್ಯಗಳನ್ನು ಜನರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನ ವಹಿಸಿ ಕೊಂಡಿದ್ದ ಕ್ಯಾಂಪ್ಕೋ ನಿರ್ದೇಶಕರಾಗಿರುವ ದಯಾನಂದ್ ಅವರು ಮಾತನಾಡುತ್ತಾ ಸೇವೆ ಯಾವಾಗಲೂ ಜನರ ಬಳಿಗೆ ತಲುಪಬೇಕು ಜನರು ಅದನ್ನು ಹುಡುಕಿಕೊಂಡು ಹೋಗುವ ಹಾಗೆ ಆಗಬಾರದು. ತಂತ್ರಜ್ಞಾನ ಮುಂದುವರೆದಂತೆ ನಾವು ಬದಲಾಗುವ ಅಗತ್ಯತೆ ಇದೆ ಕೇಳಿಬರುವಂತದು ಆಧಾರ್ ಕಾರ್ಡ್ ಅದನ್ನು ಸರಿಪಡಿಸಿ ನಮ್ಮ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಅದನ್ನು ಬಳಸಿಕೊಳ್ಳುವುದು ಬಹಳ ಉತ್ತಮವಾದಂತಹ ವಿಷಯ. ಇದನ್ನು ಪರಿಷ್ಕರಣೆ ಮಾಡಿ ಜನರ ಬಳಿಗೆ ತಲುಪಿಸುವ ಸೇವೆ ಎಂದು ಇಲ್ಲಿ ನಡೆಯುತ್ತಿದೆ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಶ್ರೀಮತಿ ಲಕ್ಷ್ಮಿ ಅವರು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯರಾದ ಸತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು, ಯೂಥ್ ಫಾರ್ ಸೇವಾ ಪ್ರತಿನಿಧಿ ಶ್ರೀಮತಿ ನಮಿತಾ ಶೈಲೇಂದ್ರ ಧನ್ಯವಾದ ಸಲ್ಲಿಸಿದರು.