ಪುತ್ತೂರು: ಅಕ್ಟೋಬರ್: 16: ದೃಶ್ಯ ನ್ಯೂಸ್ : ಪುತ್ತೂರಿನ ಗೌರಿ ಹೊಳೆಯಲ್ಲಿ ಸ್ನಾನ ಮಾಡಲೆಂದು ಗೆಳೆಯರ ಜೊತೆಗೆ ತೆರಳಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಕೆದಂಬಾಡಿ ಗ್ರಾಮದ ತಿಂಗಳಾಡಿ ಕಟ್ಟತ್ತಾರ್ ಎಂಬಲ್ಲಿ ರವಿವಾರ ಸಂಜೆ ನಡೆದಿದೆ.
ಕಟ್ಟತ್ತಾರ್ ನಿವಾಸಿ ಹಂಝ ಹಾಜಿ ಎಂಬವರ ಪುತ್ರ ತಸ್ಲೀಂ (17) ನೀರಿನಲ್ಲಿ ಮುಳುಗಿ ನಾಪತ್ತೆಯಾದ ಬಾಲಕ. ತಸ್ಲೀಂ ತನ್ನ ಗೆಳೆಯರ ಜೊತೆಗೆ ತನ್ನ ಮನೆ ಸಮೀಪದ ಎರಕ್ಕಲ ಎಂಬಲ್ಲಿರುವ ಗೌರಿ ಹೊಳೆಯಲ್ಲಿ ಸ್ನಾನಕ್ಕೆ ಹೋಗಿದ್ದು, ಈ ವೇಳೆ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ.