ಉಡುಪಿ ಪಡುಕುತ್ಯಾರು: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ ಪಡು ಕುತ್ಯಾರಿನ ಶ್ರೀ ಸರಸ್ವತೀ ಮಾತೃ ಮಂಡಳಿಯ ವತಿಯಿಂದಮಾತೃ ಮಂಡಳಿಯ ವತಿಯಿಂದ 21ಕಿಲೋಗ್ರಾಂ ಬೆಳ್ಳಿಯಲ್ಲಿ ತಯಾರಿಸಲಾದ 5.5 ಅಡಿ ಎತ್ತರ ಹಾಗೂ 3.5 ಅಡಿ ಅಗಲದ ಅತ್ಯಾಕರ್ಷಕ ಕುಸುರಿ ಕೆಲಸದೊಂದಿಗೆ ನಿರ್ಮಾಣಗೊಂಡ ಜಗದ್ಗುರುಗಳವರ “ಪಟ್ಟದ ದೇವರ ರಜತ ಮಂಟಪ” ವು
ಶರನ್ನವರಾತ್ರಿಯ ಆರಂಭದ ದಿನವಾದ ಅಕ್ಟೋಬರ್ 15 ರಂದು ಭಾನುವಾರ ಬೆಳಗ್ಗೆ 6 ಗಂಟೆಗೆ ಶ್ರೀಕರಾರ್ಚಿತ ಪೂಜೆಗೆ ಸಮರ್ಪಣೆಗೊಂಡಿತು.
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಮುಂಜಾನೆ 5 ಘಂಟೆಯಿಂದ ಬ್ರಹ್ಮಶ್ರೀ ಅಕ್ಷಯ ಶರ್ಮಾ ತಂತ್ರಿ ಕಟಪಾಡಿ ಅವರ ನೇತೃತ್ವದಲ್ಲಿ ಮಹಾಸಂಸ್ಥಾನದ ಬ್ರಹ್ಮಶ್ರೀ ಕೇಶವ ಶರ್ಮ ಇರುವೈಲು, ಬ್ರಹ್ಮಶ್ರೀ ಮೌನೇಶ್ ಶರ್ಮ ಬ್ರಹ್ಮಶ್ರೀ ರುದ್ರೇಶ್ ಶರ್ಮ ರಜತಾ ಮಂಟಪದ ಶಿಲ್ಪಿಗಳಾದ ಅಣ್ಣಪ್ಪ ಆಚಾರ್ಯ ಶಿರ್ವ,ಮಹೇಶ್ ಆಚಾರ್ಯ ಬಾರ್ಕೂರು,ಧೀರಜ್ ಆಚಾರ್ಯ ಕಾರ್ಕಳ,ಸತೀಶ್ ಆಚಾರ್ಯ ಮಂಚಕಲ್ ವಿವಿಧ ವೈದಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಇದೇ ವೇಳೆಮಹಾ ಸಂಸ್ಥಾನದ ಆಪ್ತ ಸಹಾಯಕ ಲೋಲಾಕ್ಷ ಶರ್ಮ ಕಟಪಾಡಿ ಇವರಿಂದ ಧಾನ್ಯ ಲಕ್ಷ್ಮಿ ಪೂಜೆಯ ಅಂಗವಾಗಿ ಭತ್ತದ ತೆನೆಕಟ್ಟುವ ಸಂಪ್ರದಾಯ ನೆರವೇರಿತು.
ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರ ಹೋಬಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರ್, ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಅಸೆಟ್ಅಧ್ಯಕ್ಷ ಬಿ ಸೂರ್ಯ ಕುಮಾರ್ ಹಳೆಯಂಗಡಿ,ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ,ಪ್ರಧಾನ ಕಾರ್ಯದರ್ಶಿ ರಮಾ ನವೀನ್ ಆಚಾರ್ಯ ಕಾರ್ಕಳ,ಕೋಶಾಧಿಕಾರಿ ದೀಪಾ ಸುರೇಶ್ ಆಚಾರ್ಯ ಉಡುಪಿ, ಆನೆಗುಂದಿ ಸರಸ್ವತಿ ಪೀಠ ಪಂಚ ಸಿಂಹಾಸನ ವಿಕಾಸ ಸಮಿತಿ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ಆನೆಗುಂದಿ ಗುರು ಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮಣ್ಣು, ವಿವೇಕ್ ಆಚಾರ್ಯ ಮಂಚಕಲ್ , ಆಶಾ ನಾಗರಾಜ ಆಚಾರ್ಯ ಕಾಡಬೆಟ್ಟು,ಶಾಲಿನಿ ಜಯಕರ ಆಚಾರ್ಯ ಕರಂಬಳ್ಳಿ, ರವಿ ಆಚಾರ್ಯ ಬೆಂಗಳೂರು ಲೋಕೇಶ್ ಆಚಾರ್ಯ ಅರೆಮಾದನಹಳ್ಳಿ, ಮನೋಹರ ಆಚಾರ್ಯ ಬೆಂಗಳೂರು,
ಸುಧಾಕರ ಆಚಾರ್ಯ ಕುಕ್ಕಿ ಕಟ್ಟೆ,ಇಂದಿರಾ ಪುರುಷೋತ್ತಮ ಆಚಾರ್ಯ ಪುತ್ತೂರು, ಉಷಾ ವಿವೇಕ್ ಆಚಾರ್ಯ ಮಂಚಕಲ್, ಉಷಾ ರೂಪೇಶ್ ಆಚಾರ್ಯ ಶಿರ್ವ,ರಾಘವೇಂದ್ರ ಆಚಾರ್ಯ ಉಡುಪಿ, ಉಷಾ ಸುಬ್ರಹ್ಮಣ್ಯ ಆಚಾರ್ಯ ಕಾಡಬೆಟ್ಟು, ಸುರೇಶ್ ಆಚಾರ್ಯ ಇರಂದಾಡಿ, ನವೀನ್ ಆಚಾರ್ಯ ಪಣಿಯೂರು, ರಮಾ ಅಚ್ಯುತ ಆಚಾರ್ಯ ಉಡುಪಿ, ಲತಾ ಎಸ್ ಆಚಾರ್ಯ ಕುತ್ಯಾರು, ಶಾಲಿನಿ ರತ್ನಾಕರ ಆಚಾರ್ಯ ಕುತ್ಯಾರು, ಸವಿತಾ ನಾಗೇಶ ಆಚಾರ್ಯ ಉಡುಪಿ , ಸುಲೋಚನಾ ರಮೇಶ್ ಆಚಾರ್ಯ ಎರ್ಮಾಳು, ಚಂದ್ರಾವತಿ ಶ್ರೀಧರ. ಆಚಾರ್ಯವಡೇರಹೋಬಳಿ,ಶ್ರೀಮತಿ ಪುಷ್ಪಲತಾ ಲೋಕೇಶ್ ಆಚಾರ್ಯ ಕಂಬಾರು ಹಾಗು ಇತರರು ಉಪಸ್ಥಿತರಿದ್ದರು .