ಶಿರ್ವ : ಅಕ್ಟೋಬರ್: 16: ದೃಶ್ಯ ನ್ಯೂಸ್ : ಸಂತ ಮೇರಿ ಪದವಿ ಪೂರ್ವ ಕಾಲೇಜು, ಶಿರ್ವ ಇದರ ರಾಷ್ಟ್ರೀಯ ಸೇವಾ ಯೋಜನೆಯ “ವಾರ್ಷಿಕ ವಿಶೇಷ ಶಿಬಿರದ” ಉದ್ಘಾಟನೆಯನ್ನು ಇಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.
ಶಾಸಕರು ಮಾತನಾಡಿ ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿಸಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿ ಎಂದು ಹೇಳಿದ ಅವರು ಶಿಕ್ಷಣದೊಂದಿಗೆ ಮಕ್ಕಳು ಇಂತಹ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಿರ್ವ ಸಂತ ಮೇರಿ ಹಾಗೂ ಡೋನ್ ಬೋಸ್ಕೋ ಸಮೂಹ ಶಿಕ್ಷಣ ಸಂಸ್ಥೆ ಸಂಚಾಲಕರಾದ ರೆl ಫ್ರಾl ಡಾl ಲೆಸ್ಲಿ ಸಿ ಡಿ’ಸೋಜಾ, ಮುದಂಗಡಿ ಅತಿಥಿಯ ಸಂಸ್ಥೆ ಸಂತ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ರೆl ಫಾl ಫ್ರೆಡ್ರಿಕ್ ಡಿ’ಸೋಜಾ, ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಮಿತಾ, ಶಿರ್ವ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರಾದ ಮೆಲ್ವನ್ ಎಂ ಆರ್ಹಾನ್ನ, ಶಿರ್ವ ಸಂತ ಮೇರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಸಬೀನಾ ಪ್ರಿಯ ನರ್ಹೊನ್ನ, ಸಂಚಾಲಕರಾದ ಶೋಭಾ ಫರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.