ಮಂಗಳೂರು : ಅ.15 : ದೃಶ್ಯ ನ್ಯೂಸ್ : ಉದ್ಯಾವರ ನಿವಾಸಿ ಐಸಿವೈಎಂ ಉದ್ಯಾವರ ಘಟಕದ ಸಕ್ರಿಯ ಸದಸ್ಯ ರೋಯಲ್ ಲೂಯಿಸ್ (22) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಉದ್ಯಾವರ ಪಿತ್ರೋಡಿ ನಿವಾಸಿಯಾಗಿದ್ದ ಇವರು, ಉಡುಪಿಯ ಪ್ರತಿಷ್ಠಿತ ಹೆಲ್ತ್ ಕೇರ್ ಖಾಸಗಿ ಸಂಸ್ಥೆಯಲ್ಲಿ ಕೆಲವು ಸಮಯಗಳಿಂದ ಉದ್ಯೋಗದಲ್ಲಿದ್ದು, ವೈಯುಕ್ತಿಕ ಕಾರಣ ಮತ್ತು ಖಿನ್ನತೆ ಸಮಸ್ಯೆಗಳಿಂದ ಕೆಲಸವನ್ನು ಬಿಟ್ಟಿದ್ದರು ಎನ್ನಲಾಗಿದೆ.
ಉದ್ಯೋಗದ ನಿಮಿತ್ತ ಮಂಗಳೂರಿನ ಪಿಜಿಯಲ್ಲಿದ್ದ ಇವರು ನಿನ್ನೆ ಯಾವುದೋ ಕಾರಣಕ್ಕೆ ಮನನೊoದು ವಿಷ ಸೇವಿಸಿದ್ದು, ಕೂಡಲೇ ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಮಧ್ಯರಾತ್ರಿ ನಿಧನರಾಗಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಮೃತರು ತಾಯಿ ರೋಸಿ ಲೂಯಿಸ್ ಸಹೋದರ ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ.