ಉಡುಪಿ. ಪರ್ಕಳ ಶೆಟ್ಟಿ ಬೆಟ್ಟು ವಾರ್ಡಿನ ಯಮುನಪ್ಪ ಎಂಬ ಕೂಲಿ ಕಾರ್ಮಿಕನು ಕಳೆದ 23 ವರ್ಷಗಳಿಂದ ಪರ್ಕಳ ಶೆಟ್ಟಿ ಬೆಟ್ಟು ಸುತ್ತಮುತ್ತಲಿನಲ್ಲಿ ಕೂಲಿ ಕಾರ್ಮಿಕ ಕೆಲಸ ಮಾಡುತ್ತಿದ್ದು. ನಮ್ಮ ಕುಟುಂಬ ಪರ್ಕಳ ಸುತ್ತಮುತ್ತ ಬಾಡಿಗೆಮನೆಯಲ್ಲಿದ್ದು ನೆಲೆಸಿದ್ದರು.ತಮ್ಮ ಮೂರು ಮಕ್ಕಳನ್ನು ಹೆರ್ಗಾ ದಲ್ಲಿರುವ ಶೆಟ್ಟಿ ಬೆಟ್ಟು ಶಾಲೆ ವಿದ್ಯಾಭ್ಯಾಸ ನೀಡಿ. ಮೊದಲ ಮಗ ಈಗ ಹಿರಿಯಡಕ ಪ್ರಥಮ ಡಿಗ್ರಿ ಯಲ್ಲಿ ಓದುತ್ತಿದ್ದರೆ ಮಗಳು 9ನೇ ಮತ್ತು ಮಗ 7ತರಗತಿಯಲ್ಲಿ ಶೆಟ್ಟಿ ಬೆಟ್ಟುಶಾಲೆಯಲ್ಲಿ ಕಲಿಯುತ್ತಿದ್ದಾರೆ.ಆದರೆ ನಮಗೆ ನಮ್ಮ ಊರಿನ ಬಾದಾಮಿ ತಾಲೂಕಿನ ಮಾಲಾಗಿ ಗ್ರಾಮದ ಎಂಬ ಊರಿನ ದಾಖಲೆಯ ಮೂಲಕ ಬಿ.ಪಿ.ಎಲ್ ಪಡಿತರ. ಇರುವುದರಿಂದ ನಮಗೆ ಮಾತ್ರ ಉಜ್ವಲ ಯೋಜನೆಯ ಉಚಿತ ಗ್ಯಾಸ್ ಪ್ರಯೋಜನ ಪಡೆದುಕೊಳ್ಳಲು ಉಡುಪಿಯಲ್ಲಿ ಪಡೆಯಲು ಸಾಧ್ಯವಾಗುತ್ತಿಲ್ಲ. ಗ್ಯಾಸ್ ಏಜೆನ್ಸಿಗೆಯವರು ನಮ್ಮ ಎಲ್ಲಾ ದಾಖಲೆನೀಡಿದರೂ ಗ್ಯಾಸ್ ಸಂಪರ್ಕ ನೀಡಲು ಆಗುತ್ತಿಲ್ಲ ಎಂದಿದ್ದಾರೆ..
ನಮ್ಮಂತ ಕೂಲಿ ಕಾರ್ಮಿಕರಿಗೆ ಬಿಪಿಎಲ್ ಆಧಾರ್ (ಬ್ಯಾಂಕು ಖಾತೆ. ಇಲ್ಲಿಯ ವಿಳಾಸದಲ್ಲೂ ಇದ್ದರೂ). ನಮಗೆ ಈ ಯೋಜನೆಯ ಪ್ರತಿಫಲ ಸಿಗಲಿಲ್ಲ, ಈ ಹಿಂದೆ ಇದೇ ರೀತಿ ಉಜ್ವಲ ಯೋಜನೆ ಅಡಿ ಸರಳಬೆಟ್ಟುವಿನಲ್ಲಿ. ಮೇರಿ ಎನ್ನುವವರಿಗೆ. ಎಲ್ಲಾ ದಾಖಲೆ ಇದ್ದರೂ ಏಜೆನ್ಸಿ ಗಳು ಅಂದು ಕರೆಂಟ್ ಬಿಲ್ ಗಳನ್ನು ಕೇಳುತ್ತಿದ್ದರು.( ಮೂರ್ನಾಲ್ಕು ವರ್ಷದ ಹಿಂದೆ). ಕರೆಂಟ್ ಇಲ್ಲದಿದ್ದರೂ.. ಉಚಿತ ಗ್ಯಾಸ್ ನೀಡಲು ಗ್ಯಾಸ್ ಏಜೆನ್ಸಿಗಳು ಹಿಂದೇಟು ನೀಡುತ್ತಿದ್ದರು, ಅಂದು ಪತ್ರಿಕೆಯಲ್ಲಿ ಕಟ್ಟಿಗೆಯಲ್ಲಿ ಅಡುಗೆ ಮಾಡುವ ಚಿತ್ರ ಸಹಿತ ವರದಿ ಪ್ರಕಟಗೊಂಡ ನಂತರ ಆಹಾರ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾಮಾಜಿಕ ಕಾರ್ಯಕರ್ತರನ್ನು ಸಂಪರ್ಕಿಸಿ ತಕ್ಷಣ ಗ್ಯಾಸ್ ಏಜೆನ್ಸಿಯ ಹಿರಿಯ ಅಧಿಕಾರಿಗಳು ಕೂಡ ದೂರವಾಣಿ ಮೂಲಕ ಸಂಪರ್ಕಿಸಿ, ಮರುದಿನವೇ ಉಜ್ವಲ ಯೋಜನೆಉಚಿತ ಗ್ಯಾಸ್ ಸಿಕ್ಕಿರುತ್ತದೆ.
ಎಂದು ಸಾಮಾಜಿಕ ಕಾರ್ಯಕರ್ತ ರಾದ ಗಣೇಶ್ ರಾಜ್ ಸರಳಬೆಟ್ಟು ತಿಳಿಸಿದ್ದಾರೆ. ಅದೇ ರೀತಿ ಶೆಟ್ಟಿಬೆಟ್ಟು ವಿನಃ ಹನುಮಂತ ಅವರಿಗೆ. ಬಿ.ಪಿ.ಎಲ್ ಪಡಿತರ ಚೀಟಿ ಇದ್ದರೂ ಅವರ ಮೂಲ ವಿಳಾಸ (ಬಾದಾಮಿಯ ಮಾಲಾಗಿ)ಅವರ ಊರಿನದ್ದೆ ಆಗಿದೆ ಆದುದರಿಂದ. ಇಲ್ಲಿಹೊಸಗ್ಯಾಸ್ ಸಂಪರ್ಕ ಪಡೆಯ ಕೊಳ್ಳಲು.ಆಗುತ್ತಿಲ್ಲ ನಮಗೆ ಇಲ್ಲಿಯೇ ಉಜ್ವಲ ಯೋಜನೆಯಡಿಯಲ್ಲಿ ಗ್ಯಾಸ್ ಸಿಗುವಂತೆ ಆಹಾರ ಇಲಾಖೆ ಮುತವರ್ಜಿವಹಿಸಿ.
ಕೂಲಿನಾಲಿಮಾಡಿ ಬದುಕುವಂತಹವರಿಗೆ ನಮಗೆ ಇಲ್ಲಿಯೆ ಗ್ಯಾಸ್ ಸೌಲಭ್ಯ ಒದಗಿಸಬೇಕಾಗಿ ಸಾಮಾಜಿಕ ಕಾರ್ಯಕರ್ತರಲ್ಲಿ ವಿನಂತಿಸಿಕೊಂಡಿದ್ದಾರೆ.
ಪಡಿತರ ಅಕ್ಕಿ ಹಣ ಎಲ್ಲಿಯೂ ಪಡೆಯಬಹುದು ಎಂದ್ದಿದ್ದಾರೆ. ಅದು ನಮ್ಮ ಪಡಿತರಕ್ಕೆ ಇಲ್ಲಿಯೇ ಸಿಗುತ್ತದೆ,. ಆದರೆ ಗ್ಯಾಸ್ ಸಂಪರ್ಕ ಯಾಕೆ ನೀಡುವುದಿಲ್ಲ ಎಂದು ಪ್ರಶ್ನಾರ್ಥಕ ಚಿಂತೆಯಾಗಿದೆ? .. ಅರ್ಜಿ ಇಲ್ಲಿಯೇ ಸಲ್ಲಿಸಿದ್ದೇವೆ.ಆದರೇ ಒಟ್ಟಿನಲ್ಲಿ ದಾಖಲೆ ಸರಿಯಾಗಿದ್ದರೂ ಆನ್ಲೈನ್ ಪ್ರಕ್ರಿಯೆಯಲ್ಲಿ ಹೊಸ ಉಚಿತವಾದ ಉಜ್ವಲಗ್ಯಾಸ್ ಯೋಜನೆಯಲ್ಲಿ ಸಂಪರ್ಕ ಪಡೆಯುವುದರಲ್ಲಿ ನಮಗೆ ಹಿನ್ನಡೆಯಾಗಿದೆ. ಎಂದು ಸಾಮಾಜಿಕ ಕಾರ್ಯಕರ್ತರಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕೇಂದ್ರ ಸರಕಾರದ ಇಂತಹ ಯೋಜನೆ ಬಡಬಗ್ಗರಿಗೆ ಉಪಯೋಗವಂತೆ ಈ ಯೋಜನೆ ಪ್ರಧಾನಮಂತ್ರಿಗಳು ತಂದಿದ್ದಾರೆ. ಆದರೆ ಬಡವರ ಪಾಲಿಗೆ ಇದು ಮರೀಚಿಕೆಯಾಗಿದೆ. ಈಗಲೂ ಸಹ ಕಟ್ಟಿಗೆಯಲ್ಲಿಯೇ. ಅಡುಗೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.. ನಮ್ಮ ಕುಟುಂಬದಲ್ಲಿ ಎಲ್ಲಾ ದಾಖಲೆಗಳಿದ್ದರೂ. ವಿಳಾಸ ಮಾತ್ರ.. ನಮ್ಮೂರಿನದ್ದೇ ಆಗಿರುತ್ತದೆ. ಕೂಲಿನಾಲಿ ಮಾಡಿಕೊಂಡು ಬದುಕುವ ನಾವು ಸರಕಾರದ ಯೋಜನೆ ನಮ್ಮ ಪಾಲಿಗೆ ಧಕ್ಕಧೆ ಇರುವುದು ಬೇಸರತಂದಿದೆ. ಎಂದು ಹನುಮಂತ ಅವರು ಬೇಸರವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಇಲಾಖೆ. ಆದಷ್ಟು ಬೇಗ ಇತ್ತ ಗಮನಹರಿಸುವಂತೆ ಈ ಮೂಲಕ ವಿನಂತಿಸಲಾಗಿದೆ