ಉಡುಪಿ: ಅಕ್ಟೋಬರ್ 15: ದ್ರಶ್ಯ ನ್ಯೂಸ್ :ಉಡುಪಿ ದೊಡ್ಡಣಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಸನ್ನಿಧಾನದಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ರಮಾನಂದ ಗುರೂಜಿ ಅವರ ನೇತೃತ್ವದಲ್ಲಿ ಇಂದಿನಿಂದ ಅಕ್ಟೋಬರ್ 24ರವರೆಗೆ ವಿಜಯದಶಮಿಯ ಪರ್ವಕಾಲದವರೆಗೆ ದಿನಂಪ್ರತಿ ಭಕ್ತರ ಸೇವಾರೂಪದ ಜೋಡಿ ಶ್ರೀಚಂಡಿಕಾಯಾಗ, ದುರ್ಗನಮಸ್ಕಾರ ಪೂಜೆ ನಿರಂತರ ಅನ್ನಸಂತರ್ಪಣೆಯೊಂದಿಗೆ ನವರಾತ್ರಿ ಮಹೋತ್ಸವ ಬಹು ವಿಜೃಂಭಣೆಯಿಂದ ನೆರವೇರಲಿದೆ
ತಾರೀಕು 19ರಂದು ಲಲಿತಾ ಪಂಚಮಿಯ ಪರ್ವಕಾಲದಲ್ಲಿ ಶ್ರೀ ಚಕ್ರ ಸುರಪುಜಿತೇಗೆ ಬಹು ವಿಶಿಷ್ಟವಾದ ಲಲಿತಾ ಸಹಸ್ರ ಕದಳಿಯಾಗ ನಡೆಯಲಿದೆ
ತಾರೀಕು. 20ರಂದು ಶಾರದಾ ಪ್ರತಿಷ್ಠಾಪನೆಯಿಂದ ಮಕ್ಕಳಿಗೆ ಅಕ್ಷರ ಅಭ್ಯಾಸ , ವಿದ್ಯಾರಂಭಕ್ಕೆ ಚಾಲನೆ ನೇರವೇರಲಿದೆ
ತಾರೀಕು. 24ರಂದು . ವಿಜಯ ದಶಮಿಯ ಪರ್ವಕಾಲದಲ್ಲಿ ಬಹು ಅಪರೂಪವೂ ವಿಶಿಷ್ಟವೂ ಆದಂತಹ ತ್ರಿಗುಣತ್ಮಿಕಾ ಶಕ್ತಿ ಸಂಪ್ರೀತಿಯೇ ದುರ್ಗಾ ಆದಿಶಕ್ತಿ ಮಹಾಯಾಗ, ನಡೆಯಲಿದ್ದು ಅಂದು ಸಂಜೆ ಆರಾಧನಾ ರಂಗ ಪೂಜಾ ಮಹೋತ್ಸವ ಬಲಿ ಉತ್ಸವ ವಸಂತ ಪೂಜೆಗಳು ನಿರಂತರ ಮೃಷ್ಟಾನ್ನ ಸಂತರ್ಪಣೆಯೊಂದಿಗೆ ನೆರವೇರಲಿದೆ
ಗಾನ ನಾಟ್ಯ ಪ್ರಿಯಳ ಸನ್ನಿ ಧಾನದಲ್ಲಿ ನಿತ್ಯ ನಿರಂತರವಾಗಿ ಶರನ್ನ ನವರಾತ್ರಿಯ ಪರ್ವಕಾಲದಲ್ಲಿ ಕಲಾವಿದರಿಂದ ಭರತನಾಟ್ಯ ಸೇವೆ, ಸಂಗೀತ ಸೇವೆ, ಕಲಾಸೇವೆ,ದುರ್ಗಾದಿಶಕ್ತಿ ದೇವಿಗೆ ಅಭಿಮುಖವಾಗಿ ಹಾಗೂ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ನೆರವೇರಲಿರುವುದು.
ಈ ಮಹಾನ್ ನವರಾತ್ರಿ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ದುರ್ಗಾ ಆದಿಶಕ್ತಿಯ ಪೂರ್ಣಾನುಗ್ರಹಕ್ಕೆ ಪಾತ್ರರಾಗುವಂತೆ ಭಕ್ತರರೆಲ್ಲರಿಗೂ ಆದರದ ಸ್ವಾಗತ ಬಯಸುವ ಕುಸುಮ ನಾಗರಾಜ ಆಚಾರ್ಯ ಕ್ಷೇತ್ರದ ಉಸ್ತುವಾರಿ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ , ರೈಲ್ವೆ ಬ್ರಿಜ್ ನ ಹತ್ತಿರ ಮೂಡು ಸಗ್ರಿ ಉಡುಪಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9342749650