ಕಾರ್ಕಳ : ಮೂಡಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಾರಿ ಎಂಬಲ್ಲಿ ಕೊಬ್ಬರಿ ಒಣಗಿಸುವ ಕೊಠಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ತಕ್ಷಣ ಅಗ್ನಿಶಾಮಕ ದಳ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಲಾಯಿತು.
ಆದರೆ ಈ ವೇಳೆಗಾಗಲೇ ಸುಮಾರು ನಾಲ್ಕು ಟನ್ ಕೊಬ್ಬರಿ ಬೆಂಕಿಯಿಂದ ನಷ್ಟವಾಗಿದೆ ಎಂದು ತಿಳಿದು ಬಂದಿದೆ
ಕಾರ್ಯಾಚರಣೆ ಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಂ. ಸಂಜೀವ್, ಸಿಬ್ಬಂದಿ ಗಳಾದ ಸುರೇಶ್,ಜಯಮೂಲ್ಯ , ಹಸನ್ ಸಾಬ್ , ಸುಜಯ್, ವಿನಾಯಕ್ ಪಾಲ್ಗೊಂಡಿದ್ದರು.