ಉಡುಪಿ : ಅಕ್ಟೋಬರ್ 11:ದ್ರಶ್ಯ ನ್ಯೂಸ್ :ಮೀನು ಗಾರಿಕೆಯ ನಡೆಸುತ್ತಿದ್ದ ವೇಳೆ ಮೀನುಗಾರರೋರ್ವರಿಗೆ ತಲೆ ಸುತ್ತು ಬಂದು ಬಿದ್ದು ಸಾವನ್ನಪ್ಪಿರುವ ಘಟನೆ ಅ. 9ರಂದು ಸಂಭವಿಸಿದೆ
ಜಯ ಬಂಗೇರ (57) ಮೃತಪಟ್ಟವರು. ಮತ್ಸ್ಯ ಪ್ರಿಯ ಬೋಟಿನಲ್ಲಿ ದುಡಿಯುತ್ತಿದ್ದ ಅವರು ಸೋಮವಾರ ಸಂಜೆ ಇತರ 32 ಮಂದಿ ಜನರೊಂದಿಗೆ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ತಲೆ ತಿರುಗಿದ ಹಾಗೆ ಆಗಿ ಬೀಳುತ್ತಿರುವ ಸಮಯದಲ್ಲಿ ಪಕ್ಕದಲ್ಲಿದ್ದ ರಮೇಶ ಬಂಗೇರ ಅವರು ಜಯ ಬಂಗೇರ ಅವರ ಕೈಯನ್ನು ಹಿಡಿದು ಮೇಲೆತ್ತಿ ಬೋಟಿನಲ್ಲಿ ಮಲಗಿಸಿದರು.
ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಆದಾಗಲೇ ಮೃತ ಪಟ್ಟಿರುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.