ಮಂಗಳೂರು : ಅಕ್ಟೋಬರ್ 10: ದೃಶ್ಯ ನ್ಯೂಸ್ : ನರೇಂದ್ರ ಮೋದಿಯನ್ನು ಮೂರನೇ ಬಾರಿಗೆ ಪ್ರಧಾನಿ ಮಾಡುವ ಉದ್ದೇಶದಿಂದ ಮೋದಿ ಬ್ರಿಗೇಡ್ ಸಂಘಟನೆ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಬ್ರಿಗೇಡ್ ಲೋಗೋ ಬಿಡುಗಡೆ ಮಾಡಲಾಯಿತು.
ಈ ಕುರಿತು ಮಾತಾಡಿದ ಸ್ಥಾಪಕ ಅಧ್ಯಕ್ಷ ಪ್ರಶಾಂತ್ ಬಂಗೇರ ಮೋದಿ ಜೀ ಯನ್ನು ಮತೊಮ್ಮೆ ಪ್ರಧಾನಿ ಮಾಡೋದು ನಮ್ಮ ಗುರಿ ಅದಕ್ಕಾಗಿ ಸಂಘಟನೆ ಹಾಗೂ ಪಕ್ಷದಿಂದ ದೂರ ಉಳಿದಿರುವ ಕಾರ್ಯಕರ್ತರು ಮತ್ತೆ ಕರೆ ತಂದು ಮೋದಿ ಗಾಗಿ ಒಗ್ಗಟ್ಟು ಪ್ರದರ್ಶನ ಮಾಡಿ ಮತೊಮ್ಮೆ ಮೋದಿ ಯನ್ನು ಪ್ರಧಾನಿ ಮಾಡುವ ಉದ್ದೇಶದಿಂದ ಮೋದಿ ಬ್ರಿಗೇಡ್ ಸ್ಥಾಪನೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಎಂ. ಮಂಗಳೂರು ದಕ್ಷಿಣದ ಶಾಸಕರಾದ ವೇದವ್ಯಾಸ್ ಕಾಮತ್, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಮಾರೋಳಿ, ಮೋದಿ ಬ್ರಿಗೇಡ್ ಸ್ಥಾಪಕ ಅಧ್ಯಕ್ಷ ಪ್ರಶಾಂತ್ ಬಂಗೇರ ಹಾಗೂ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.