ಹಿರಿಯಡ್ಕ: ಅಕ್ಟೋಬರ್: 10: ದೃಶ್ಯ ನ್ಯೂಸ್ : ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ.) ಮಂಗಳೂರು ಇದರ ಹಿರಿಯಡ್ಕ ಉಪಸಂಘದ ನೂತನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ, ಉದ್ಯಮಿ ಹಾಗೂ ಸ್ಯಾಕ್ಸೋಫೋನ್ ಕಲಾವಿದರಾದ ಹಿರಿಯಡ್ಕ ರಾಜೇಂದ್ರ ಕುಮಾರ್ ಇವರು 2023-26 ಸಾಲಿಗೆ ಕೇಂದ್ರೀಯ ಸಮಿತಿಯ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುತ್ತಾರೆ.
ಉಪಾಧ್ಯಕ್ಷರಾಗಿ ಉದಯ ಸೇರಿಗಾರ್, ಕಾರ್ಯದರ್ಶಿ ರಮೇಶ್ ಸೇರಿಗಾರ್, ಕೋಶಾಧಿಕಾರಿ ಮಹೇಶ್ ದೇವಾಡಿಗ, ಜೊತೆ ಕಾರ್ಯದರ್ಶಿಗಳಾಗಿ ಆಶಾ ರಮೇಶ್, ಮನ್ಮಥ ದೇವಾಡಿಗ, ಸಂಘಟನಾ ಕಾರ್ಯದರ್ಶಿಯಾಗಿ ರತ್ನಾಕರ್ ದೇವಾಡಿಗ ಮತ್ತು ಲತಾ ಚಂದ್ರಶೇಖರ್ ಚುನಾಯಿತರಾದರು.
ನೂತನ ಕಾರ್ಯಕಾರಿ ಸಮಿತಿಗೆ ಸದಸ್ಯರುಗಳಾಗಿ ಸದಾನಂದ ಸೇರಿಗಾರ್, ಮುದ್ದಣ್ಣ ದೇವಾಡಿಗ, ಪಿ ಮಂಜುನಂಥ ಸೇರಿಗಾರ್, ನಾರಾಯಣ ಸೇರಿಗಾರ್ ಹೆರ್ಗ, ಆನಂದ ಸೇರಿಗಾರ, ನಾರಾಯಣ ಸೇರಿಗಾರ್, ರೇವತಿ ಎಂ, ಮೋಹನ ದೇವಾಡಿಗ, ಸುಂದರ ಸೇರಿಗಾರ, ನಾಗೇಶ, ಸದಾಶಿವ ದೇವಾಡಿಗ, ದಿನೇಶ ದೇವಾಡಿಗ, ರಾಮ ದೇವಾಡಿಗ, ಗೋಪಾಲ ಸೇರಿಗಾರ, ವಿಶ್ವನಾಥ ದೇವಾಡಿಗ, ಎಚ್ ಗಣೇಶ್ , ಶಾಂಭವಿ ಆರ್. ಅವಿರೋಧ ಆಯ್ಕೆಯಾಗಿದ್ದಾರೆ.