⭕️ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯಚರಣೆ
ಮಂಗಳೂರು: ಅಕ್ಟೋಬರ್ 10: ದೃಶ್ಯ ನ್ಯೂಸ್ : ನಗರದ ಹಳೆ ಬಂದರು ದಕ್ಕೆ ಬಳಿ ಮೀನುಗಾರಿಕಾ ದೋಣಿಯೊಂದಕ್ಕೆ ಇಂದು ಮಂಗಳವಾರ ಮುಂಜಾನೆ ಬೆಂಕಿ ಹೊತ್ತಿಕೊಂಡಿದೆ.
ದೋಣಿಯೊಂದಕ್ಕೆ ಬೆಂಕಿ ಹೊತ್ತುಕೊಂಡ ಬಗ್ಗೆ ಬೆಳಿಗ್ಗೆ 4.50 ಮಾಹಿತಿ ಬಂದಿತ್ತು. ತಕ್ಷಣವೇ ಪಾಂಡೇಶ್ವರದ ಅಗ್ನಿಶಾಮಕ ಠಾಣೆಯ ಸಿಬ್ಬಂಧಿಗಳು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ದೋಣಿಯಲ್ಲಿ ಡೀಸೆಲ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಲಂಗರು ಹಾಕಿದ್ದಾಗಲೇ ದೋಣಿಗೆ ಬೆಂಕಿ ತಗುಲಿದೆ. ಅದರ ಹಗ್ಗ ಬಿಚ್ಚಿ ಬಿಟ್ಟಿದ್ದಾರೆ. ದೋಣಿ ಕೆಲವು ದೂರ ನೀರಿನಲ್ಲಿ ಸಾಗಿತ್ತು. ಆದ್ದರಿಂದ ಬೆಂಕಿ ಇತರ ದೋಣಿಗಳಿಗೆ ಹಬ್ಬುವುದು ತಪ್ಪಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ದೋಣಿ ಯಾರದ್ದು ಎಂಬುದು ಇನ್ನೂ ಖಚಿತಪಟ್ಟಿಲ್ಲ. ಎಷ್ಟು ನಷ್ಟ ಉಂಟಾಗಿದೆ ಎಂಬುದನ್ನು ಇನ್ನಷ್ಟೇ ಅಂದಾಜಿಸಬೇಕಿದೆ ಎಂದು ಅವರು ತಿಳಿಸಿದರು.