ಕಾರ್ಕಳ :ಅಕ್ಟೋಬರ್ 09:ದ್ರಶ್ಯ ನ್ಯೂಸ್ : ವಿಶ್ವ ಮಾನಸಿಕ ಅರೋಗ್ಯ ದಿನಾಚರಣೆ ಪ್ರಯುಕ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕುಕ್ಕುಂದೂರು & ವಿಜೇತ ವಿಶೇಷ ಶಾಲೆ ಸಹಯೋಗದಲ್ಲಿ ವಿಶೇಷ ಮಕ್ಕಳ ಹೆತ್ತವರಿಗೆ ಮಾನಸಿಕ ಆರೋಗ್ಯದ ಮಾಹಿತಿ ಕಾರ್ಯಾಗಾರ ಹಾಗೂ ಅರೋಗ್ಯ ತಪಾಸಣಾ ಶಿಬಿರ ಇಂದು ವಿಜೇತ ವಿಶೇಷ ಶಾಲೆಯಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕುಮುದಾವತಿ ಮಾನಸಿಕ ಆರೋಗ್ಯ ದ ಬಗ್ಗೆ ಮಾಹಿತಿ ನೀಡಿದರು .ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿ ಅನಿತಾ, ಇಷ್ಟ ಮೊಬಿಲಿಟಿ ಪ್ರೈವೆಟ್ ಲಿಮಿಟೆಡ್ ಮ್ಯಾನೇಜರ್ ಶ್ರೀ ರವೀಂದ್ರ ವಿಜೇತ ವಿಶೇಷ ಶಾಲಾ ಸ್ಥಾಪಕಿ ಡಾ ಕಾಂತಿ ಹರೀಶ್ ಉಪಸ್ಥಿತರಿದ್ದರು.
ವಿಜೇತ ವಿಶೇಷ ಶಾಲಾ ಮಕ್ಕಳು ಹೆತ್ತವರು ಹಾಗೂ ಸಿಬ್ಬಂದಿಯವರು ಸುಮಾರು 200ಕ್ಕಿಂತಲೂ ಹೆಚ್ಚು ಮಂದಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.