ಉಚ್ಚಿಲ : ಅಕ್ಟೋಬರ್ 10:ದ್ರಶ್ಯ ನ್ಯೂಸ್ :ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ಸಹಕಾರ – ಸಹಯೋಗದೊಂದಿಗೆ ಅ.15 ರಿಂದ ಅ.24 ರವರೆಗೆ ನವರಾತ್ರಿ ಉತ್ಸವದೊಂದಿಗೆ ಈ ಬಾರಿಯೂ `ಉಚ್ಚಿಲ ದಸರಾ ಉತ್ಸವ-2023′ ಅನ್ನು ಆಚರಿಸಲು ದ.ಕ.ಮೊಗವೀರ ಮಹಾಜನ ಸಂಘ, ಕ್ಷೇತ್ರದ ಆಡಳಿತ ಸಮಿತಿ ಮತ್ತು ಕ್ಷೇತ್ರದ ಭಕ್ತಾಭಿಮಾನಿ ಬಳಗ ನಿರ್ಧರಿಸಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್ ತಿಳಿಸಿದರು.
ಉಚ್ಚಿಲದಲ್ಲಿ ನಿನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ನವರಾತ್ರಿ ಮತ್ತು ದಸರಾ ಪ್ರಯುಕ್ತ ಪ್ರತೀದಿನ ಬೆಳಿಗ್ಗೆ ಚಂಡಿಕಾ ಹೋಮ, ಮಧ್ಯಾಹ್ನ ಅನ್ನಸಂತರ್ಪಣೆ, ಭಜನಾ ಕಾರ್ಯಕ್ರಮ, ಸಂಜೆ ಸಹಸ್ರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ನವದುರ್ಗೆಯರು ಮತ್ತು ಶಾರದಾ ಮಾತೆಗೆ ತ್ರಿಕಾಲ ಪೂಜೆ, ವಿಜಯ ದಶಮಿಯಂದು ಬೃಹತ್ ಶೋಭಾಯಾತ್ರೆಯ ಮೂಲಕ ವೈಭವದ ಜಲಸ್ಥಂಭನಾ ಕಾರ್ಯಕ್ರಮ ನಡೆಯಲಿದೆ ಎಂದರು
ಅ. 15ರಂದು ಪ್ರತಿಷ್ಠೆ, ಉದ್ಘಾಟನೆ : ಅ. 15ರಂದು ಬೆಳಗ್ಗೆ9.30 ಕ್ಕೆ ಉಚ್ಚಿಲ ಶಾಲಿನಿ ಡಾ| ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆ ನೆರವೇರಲಿದ್ದು 10 ಗಂಟೆಗೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರು ಉಚ್ಚಿಲ ದಸರಾ 2023ಕ್ಕೆ ಚಾಲನೆ ನೀಡಲಿದ್ದಾರೆ. 10.15ಕ್ಕೆ ನೂತನ ಅನ್ನ ಛತ್ರ ಕಟ್ಟಡ ಮತ್ತು ಸುಸಜ್ಜಿತ ಅತಿಥಿಗೃಹ ಉದ್ಘಾಟನೆ, 10.30 ಕ್ಕೆ ಫಲಪುಷ್ಪ ಪ್ರದರ್ಶನ, ಪುಸ್ತಕ ಮೇಳ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿನ ಮೀನುಗಾರಿಕೆ ಯೋಜನೆಗಳ ಮಾಹಿತಿ ಮತ್ತು ಮೀನುಗಾರಿಕಾ ಪರಿಕರಗಳ ಪ್ರದರ್ಶನ ಉದ್ಘಾಟನೆ, ಸಂಜೆ 6.15 ಕ್ಕೆ ಯುವ ದಸರಾ ಹಾಗೂ ಹತ್ತು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಲಿದೆ ಎಂದರು.
ಸಾಂಸ್ಕೃತಿಕ – ಕಲಾ ವೈಭವ : ಅ. 15ರಂದು ಯುವ ದಸರಾ – ನೃತ್ಯ ಸ್ಪರ್ಧೆ, ಅ. 19ರಂದು ಸಂಜೆ 4.30 ರಿಂದ ವಿ| ಪವನ ವಿ. ಆಚಾರ್ ಬಳಗದವರಿಂದ ಶತವೀಣಾವಲ್ಲರಿ ಏಕಕಾಲದಲ್ಲಿ 151 ವೀಣೆಗಳ ವಾದನ ಕಾರ್ಯಕ್ರಮ, ಅ. 20 ರಂದು ಮುದ್ದು ಮಕ್ಕಳಿಂದ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಅ. 21 ರಂದು ರಂಗೋಲಿ ಸ್ಪರ್ಧೆ, ಮಹಿಳೆಯರ ಹುಲಿವೇಷ