ಉಡುಪಿ, ಅಕ್ಟೋಬರ್ 10 : ಹೆಬ್ರಿ ತಾಲೂಕು ನಾಡ್ಪಾಲು ಗ್ರಾಮ ಪಂಚಾಯಿತಿಯ ಪಶ್ಚಿಮ ಘಟ್ಟಗಳ ತಪ್ಪಲಿನ ಕಾಡಿನ ಅಂಚಿನಲ್ಲಿ ಬಹುತೇಕ ಸಮಾಜದ ಕಟ್ಟ ಕಡೆಯ, ಜನವಸತಿಯ ಕೊನೆಯ ಪ್ರದೇಶದಲ್ಲಿ ನೆಲೆಸಿರುವ, ಮಲೆಕುಡಿಯ ಕುಟುಂಬಗಳನ್ನು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಶನಿವಾರ ಭೇಟಿ ಮಾಡಿದರು.
ನಗರ ಪ್ರದೇಶದಿಂದ ಬಹುದೂರದ, ಅರಣ್ಯದ ಅತ್ಯಂತ ಒಳಭಾಗದ ಪ್ರದೇಶಗಳಾದ ಪೀತಾಬೈಲು, ತಿಂಗಳ ಮಕ್ಕಿ, ತೆಂಗಮಾರು ಗ್ರಾಮದಲ್ಲಿ ವಾಸಿಸುವ ಬುಡಕಟ್ಟು ಕುಟುಂಬಗಳ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 3 ರಿಂದ 4 ಕಿ.ಮೀ ಕಾಡು ಕಚ್ಛಾ ದಾರಿಯಲ್ಲಿ ಗುಡ್ಡಗಳನ್ನ ಹತ್ತಿ ಇಳಿದು ನದಿ, ಕೊಳ್ಳಗಳನ್ನು ದಾಟಿ ನಡೆದು ಕುಗ್ರಾಮಕ್ಕೆ ಭೇಟಿ ನೀಡಿದರು.
ಹಲವು ವರ್ಷಗಳಿಂದ ಆಧುನಿಕ ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಮಲೆಕುಡಿಯ ಮೂಲ ಆದಿ ನಿವಾಸಿಗಳೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸಿ, ಅವರ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕಿಸಿ, ಬುಡಕಟ್ಟು ಜನಾಂಗದವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗುವುದಾಗಿ ತಿಳಿಸಿದರು.
ಪಶ್ಚಿಮ ಘಟ್ಟಗಳ ಅಂಚಿನ ಕಾಡಿನ ತೆಂಗಮಾರು ಗ್ರಾಮದಲ್ಲಿ ವಾಸವಾಗಿರುವ ನಾರಾಯಣ ಗೌಡ ಅವರನ್ನು ಸಂಪರ್ಕಿಸಿ, ಅವರ ವಾಸಗೃಹವನ್ನು ವೀಕ್ಷಿಸಿ, ಸರ್ಕಾರದ ಸೌಲಭ್ಯಗಳು ತಲುಪುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಅವರ ಸಮಸ್ಯೆಗಳನ್ನು ಆಲಿಸಿ, ಅವರಿಗೆ ಮನೆಯನ್ನು ನಿರ್ಮಿಸಿ ಕೊಡಲು ಸಮಗ್ರ ಗಿರಿಜನ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.
ತಿಂಗಳಮಕ್ಕಿ ಗ್ರಾಮದಲ್ಲಿ ವಾಸವಿರುವ ವಿಕಲಚೇತನ ಲಕ್ಷಣಗೌಡ ಅವರನ್ನು ಭೇಟಿ ಮಾಡಿ, ಅಂಗವಿಕಲ ಪಿಂಚಣಿ ಪ್ರತಿ ತಿಂಗಳು ತಲುಪುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು, ಸರ್ಕಾರದಿಂದ ಬುಡಕಟ್ಟು ಜನರಿಗೆ ವಿಶೇಷವಾಗಿ ನೀಡುತ್ತಿರುವ ಆಹಾರ ಸಾಮಗ್ರಿಗಳ ಪೂರೈಕೆ ಬಗ್ಗೆ ಸಹ ಮಾಹಿತಿ ಪಡೆದು, ಮನೆಯ ದುರಸ್ತಿಗೆ ಅನುದಾನ ಒದಗಿಸಲು ಸಮಗ್ರ ಗಿರಿಜನ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಪೀತಬೈಲು ಗ್ರಾಮಕ್ಕೆ ಭೇಟಿ ನೀಡಲು ಕಾಡಿನ ಕಚ್ಛಾ ರಸ್ತೆಯಲ್ಲಿ ನಡೆದು ಕಾಲು ಸಂಕದ ಮೂಲಕ ದಾಟಲು ಮುಂದಾದಾಗ, ಕೆಲವೇ ಕ್ಷಣದ ಮುಂದೆ