ಉಡುಪಿ: ಅಕ್ಟೋಬರ್ 10: ದ್ರಶ್ಯ ನ್ಯೂಸ್ :ಜಿಲ್ಲೆಯ ನೂತನ ಜಿಲ್ಲಾ ಸರಕಾರಿ ವಕೀಲರಾಗಿ ಉಡುಪಿಯ ಹಿರಿಯ ನ್ಯಾಯವಾದಿ ಮೇರಿ ಆಯನ್ನಿ ರಂಜನಿ ಶ್ರೇಷ್ಠ ಹಾಗೂ ಅಪರ ಸರಕಾರಿ ವಕೀಲರಾಗಿ ಉಡುಪಿಯ ಇನ್ನೋರ್ವ ಹಿರಿಯ ನ್ಯಾಯವಾದಿ ಭುವನೇಂದ್ರ ಸುವರ್ಣ ರನ್ನು ನೇಮಕಾತಿಗೊಳಿಸಿ ಸರಕಾರ ಆದೇಶ ಹೊರಡಿಸಿದೆ ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್‌ಕುಮಾರ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರಕಾರ ಈ ಹಿಂದಿನ ಜಿಲ್ಲಾ ಸರಕಾರಿ ವಕೀಲರು ಹಾಗೂ ಅಪರ ಸರಕಾರಿ ವಕೀಲರನ್ನು ಅವರ ಹುದ್ದೆಯ ಕರ್ತವ್ಯ ದಿಂದ ಬಿಡುಗಡೆಗೊಳಿಸಿ ಒಂದು ವರ್ಷದ ಅವಧಿಗೆ 21 ಮಂದಿ ಜಿಲ್ಲಾ ಸರಕಾರಿ ವಕೀಲರನ್ನು ಹಾಗೂ 31 ಮಂದಿ ಅಪರ ಸರಕಾರಿ ವಕೀಲರನ್ನು ವಿವಿಧ ಜಿಲ್ಲೆಗಳಿಗೆ ನಿಯೋಜಿಸಿ ಆದೇಶ ಹೊರಡಿಸಿದೆ.
ಕುಂದಾಪುರದ ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ಅಪರ ಸರಕಾರಿ ವಕೀಲರಾಗಿ ಶಿವರಾಮ್ ಶ್ರೀಯಾನ್ ಅವರನ್ನು ನಿಯೋ ಜಿಸಿ ಸರಕಾರ ಆದೇಶ ಹೊರಡಿಸಿದೆ.