⭕️ಸುಮಾರು 20 ಲಕ್ಷ ರೂ.
ಮೌಲ್ಯದ 347 ಗ್ರಾಂ ಚಿನ್ನ ವಶಕ್ಕೆ: ಕಸ್ಟಮ್ಸ್ ಇಲಾಖೆ ಟ್ವೀಟ್
ಬಜ್ಪೆ :ಅಕ್ಟೋಬರ್: 09: ದೃಶ್ಯ ನ್ಯೂಸ್ : ಅಕ್ರಮವಾಗಿ ವಿದೇಶದಿಂದ ಚಿನ್ನ ಸಾಗಾಟ ಮಾಡುವ ಸ್ಮಗ್ಲರ್ ಗಳು ಇದೀಗ ಹೊಸ ರೀತಿಯ ಅವಿಷ್ಕಾರ ಮಾಡಿದ್ದಾರೆ. ಈ ಬಾರಿ ಖೀರ್ ಮಿಕ್ಸ್ ಪಾಕೆಟ್ ಗಳಲ್ಲಿ ಚಿನ್ನ ಇಟ್ಟು ಸಾಗಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ ಘಟನೆ ಮಂಗಳೂರು ಅಂತಾರಷ್ಟ್ರೀಯ ವಿಮಾನ ನಿಲ್ದಾಣ ಬಜ್ಪೆಯಲ್ಲಿ ಸಂಭವಿಸಿದೆ.
ದುಬೈನಿಂದ ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ (ಎಂಐಎ) ಬಂದಿಳಿದ ಪ್ರಯಾಣಿಕ ರೊಬ್ಬರು ‘ಖೀರ್ ಮಿಕ್ಸ್’ ಪೊಟ್ಟಣಗಳಲ್ಲಿ ಕಳ್ಳಸಾಗಣೆ ಮಾಡಿದ್ದ ಚಿನ್ನವನ್ನು ಇದೀಗ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯಿಂದ 24 ಕ್ಯಾರೆಟ್ನ 347 ಗ್ರಾಂ ಚಿನ್ನವನ್ನು ವಶಪಡಿಸಿ ಕೊಳ್ಳಲಾಗಿದೆ. ಇದರ ಮೌಲ್ಯ ₹ 20 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ಟ್ವೀಟ್ ಮಾಡಿದೆ ಎಂದು ತಿಳಿದು ಬಂದಿದೆ.
ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಎಂಐಎಗೆ ಬಂದಿಳಿದ ಪ್ರಯಾಣಿಕರೊಬ್ಬರ ಬ್ಯಾಗ್ನಲ್ಲಿ ಬಳಿ ‘ಕಿಚನ್ ಟ್ರೆಜರ್ಸ್’ ಖೀರ್ ಮಿಕ್ಸ್ನ ಐದು ಪೊಟ್ಟಣಗಳಿದ್ದವು. ಸಂದೇಹ ಬಂದಿದ್ದರಿಂದ ಅವುಗಳನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ ಚಿನ್ನ ಇರುವುದು ಗೊತ್ತಾಯಿತು ಎಂದು ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆಯ ಮೂಲಗಳು ತಿಳಿಸಿವೆ.