ಉಡುಪಿ :ಅಕ್ಟೋಬರ್ 06:ದ್ರಶ್ಯ ನ್ಯೂಸ್ :ಈಜಲು ತೆರಳಿದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಕಾಪು ತಾಲೂಕು ಬೆಳಪು ಕೆಐಎಡಿಬಿ ಯೋಜನಾ ಪ್ರದೇಶದಲ್ಲಿ ನಡೆದಿದೆ.
ಮೃತ ಪಟ್ಟ ಬಾಲಕನನ್ನು ವಿಶ್ವಾಸ್ ನಾಯಕ್ (11) ಎಂದು ಗುರುತಿಸಲಾಗಿದೆ. ಇನ್ನಂಜೆ ಎಸ್‌ಎಸ್ ಆಂಗ್ಲಮಾಧ್ಯಮ ಶಾಲೆಯ ಏಳನೇಯ ತರಗತಿ ವಿದ್ಯಾರ್ಥಿ ವಿಶ್ವಾಸ್ ಗುರುವಾರ ಶಾಲೆಯಿಂದ ಬಂದವನು ಸ್ನೇಹಿತರ ಜೊತೆ ಕೆರೆಗೆ ಈಜಲು ತೆರಳಿದ್ದ ಎನ್ನಲಾಗಿದ್ದು ಈಜುತ್ತಿದ್ದ ವಿಶ್ವಾಸ್ ಮುಳುಗಿ ಅಸ್ವಸ್ಥನಾಗಿದ್ದನ್ನು ಕಂಡು ಸ್ನೇಹಿತರು ಮಹಿಳೆಯೊಬ್ಬರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ಸ್ಥಳೀಯರು ಕೆರೆಯಿಂದ ವಿಶ್ವಾಸ್‌ನನ್ನು ಮೇಲಕ್ಕೆತ್ತಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ವಿಶ್ವಾಸ್ ನಾಯಕ್ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.