ಉಡುಪಿ: ಅಕ್ಟೋಬರ್ 05:ದ್ರಶ್ಯ ನ್ಯೂಸ್ : ನಾಡೋಜ ಡಾ.ಜಿ.ಶಂಕರ್ ರವರ 68 ನೇ ಹುಟ್ಟುಹಬ್ಬದ ಪ್ರಯುಕ್ತ ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಎಲ್ಲಾ ಘಟಕದ ವತಿಯಿಂದ ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದು ಮಲ್ಪೆ ಘಟಕದ ವತಿಯಿಂದ ವಿಕಲಚೇತನ ಸ್ವ ಉದ್ಯೋಗಿ ಜಯ ಪೂಜಾರಿ ಕಲ್ಮಾಡಿ ಇವರಿಗೆ ಗೌರವ ಸನ್ಮಾನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ರಾಜೇಂದ್ರ ಸುವರ್ಣ ಹಿರಿಯಡಕ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಶ್ ಕೊರವಡಿ, ಜಿಲ್ಲಾ ಸಮಿತಿಯ ಪದಾಧಿಕಾರಿಯಾದ ವಿಶಾಲಾಕ್ಷಿ ರಮೇಶ್,ಮಲ್ಪೆ ಮಹಿಳಾ ಸಂಘಟನೆಯ ಶ್ರೀಲತಾ ಜೀವನ್ ,ನಿಕಟ ಪೂರ್ವ ಅಧ್ಯಕ್ಷರಾದ ಯಶೋದ ಕೇಶವ್,ಕಾರ್ಯದರ್ಶಿ ಭವ್ಯಾ ರವಿ, ಸದಸ್ಯರುಗಳಾದ ಶಶಿಕಲಾ ಸುಂದರ್,ಲಲಿತಾ, ಚಂದ್ರಪ್ರಭಾ, ನಿರಂಜಿನಿ,ಸಂಗೀತಾ, ಸಂಪ್ರೀತ,ಶಾಲಿನಿ,ಯಶೋದ ಜಗದೀಶ್,ಪುಷ್ಪಾ ಸುರೇಶ್ ಇವರುಗಳು ಉಪಸ್ಥಿತರಿದ್ದರು.
ಜಿಲ್ಲಾ ಸಮಿತಿಯ ಸದಸ್ಯರಾದ ನವೀನ್ ಶೆಟ್ಟಿಬೆಟ್ಟು ಕಾರ್ಯಕ್ರಮ ನಿರೂಪಣೆ ಮಾಡಿದರು..