ಕಾರ್ಕಳ : ಅಕ್ಟೋಬರ್ 05:ದ್ರಶ್ಯ ನ್ಯೂಸ್ :ಸುಮೇಧ ಫ್ಯಾಷನ್ ಇನ್ಸ್ಟಿಟ್ಯೂಟ್ ಕಾರ್ಕಳ ಇದರ ಸಂಸ್ಥಾಪಕಿ ಸಾಧನ ಜಿ ಅಶ್ರೀತ್ ಅವರು ಮಹಾತ್ಮಾ ಗಾಂಧಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಆಯ್ಕೆಯಾಗಿದ್ದಾರೆ
ಜನಸ್ನೇಹಿ ಫೌಂಡೇಶನ್ (ರಿ) ಹಾಗೂ ಶ್ರೀನಿಧಿ ಫೌಂಡೇಶನ್ (ರಿ) ಇವರ ಸಹಯೋಗದಲ್ಲಿ ಭಾನುವಾರ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಭವನ, ಆರ್. ಎನ್. ಶೆಟ್ಟಿ ಕ್ರೀಡಾಂಗಣದ ಹತ್ತಿರ ಮಹಾತ್ಮ ಗಾಂಧಿ ಜಯಂತ್ಯೋತ್ಸವ 2023-24ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧನ ಅಶ್ರೀತ ಇವರಿಗೆ ಮಹಾತ್ಮಾ ಗಾಂಧಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸಾಧನ ಜಿ ಆಶ್ರೀತರವರು ಫ್ಯಾಷನ್ ಡಿಸೈನರ್,ಧಾರಾವಾಹಿ, ಚಲನ ಚಿತ್ರ ಇತ್ಯಾದಿ ವಸ್ತ್ರ ವಿನ್ಯಾಸಕಿ,ಮಹಿಳೆ ಸ್ವಾವಲಂಬನೆ ಸಾಧಿಸಲು ರಾಜ್ಯಾದ್ಯಂತ ಕಾರ್ಯಕ್ರಮ ನೀಡಿದ್ದಾರೆ ಹಾಗೂ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಮಹಿಳೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿದ್ದಾರೆ.ನಾಡು, ನುಡಿ, ಸಂಸ್ಕೃತಿ, ಕಲೆ,ಶಿಕ್ಷಣ ಹಾಗೂ ಸಮಾಜ ಕ್ಷೇತ್ರದಲ್ಲಿನ ತಮ್ಮ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಅವರಿಗೆ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಡ ಶ್ರೀನಿಧಿ ಫೌಂಡೇಶನ್ ಗೌರವಾಧ್ಯಕ್ಷರಾದ ಡಾ ಮಂಜುನಾಥ ಎನ್. ಶಿವಣ್ಣನವರ್ ತಿಳಿಸಿದ್ದಾರೆ