ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಮಂಗಳೂರಿನ, ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ICCR) ಮತ್ತು ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಮಣಿಪಾಲ್ ಅಕಾಡೆಮಿಯಲ್ಲಿ “ಸಾಂಪ್ರದಾಯಿಕ ಭಾರತೀಯ ಜ್ಞಾನ ವ್ಯವಸ್ಥೆಯ ಸಾರ್ವತ್ರಿಕೀಕರಣ (UTIKS) ಪೋರ್ಟಲ್” ಆನ್‌ಲೈನ್ ವೇದಿಕೆಯ ಬಿಡುಗಡೆ ಸಮಾರಂಭವನ್ನು ಅಕ್ಟೋಬರ್ 5ರಂದು ಆಯೋಜಿಸಲಾಗಿತ್ತು
UTIKS ಪೋರ್ಟಲ್ ಅನ್ನು ICCR ನ ಗೌರವಾನ್ವಿತ ಅಧ್ಯಕ್ಷರಾದ ಡಾ. ವಿನಯ್ ಸಹಸ್ರಬುದ್ಧೆ ಅವರು ಉದ್ಘಾಟಿಸಿದರು, ಐಸಿಸಿಆರ್‌ನ ಮಹಾನಿರ್ದೇಶಕ ಶ್ರೀ ಕುಮಾರ್ ತುಹಿನ್, ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ. ನಾರಾಯಣ್ ಸಭಾಹಿತ್, ಕರ್ನಾಟಕ ರಾಜ್ಯ ಸರ್ಕಾರದ ಗಣ್ಯರು ಮತ್ತು ಅಧಿಕಾರಿಗಳು ಮತ್ತು ಮಾಹೆಯ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಈ ಸಮಾರಂಭವು ನಡೆಯಿತು.
ಪ್ರಸ್ತುತಿಯ ಸಮಯದಲ್ಲಿ, ಸಂಕ್ಷಿಪ್ತ ನಿರೂಪಣೆಯೊಂದಿಗೆ ಈ UTIKS ವೀಡಿಯೊಗಳನ್ನು ಪ್ರದರ್ಶಿಸುವ ವೀಡಿಯೊ ಕ್ಲಿಪ್‌ಗಳನ್ನು ICCR ನ ಉಪ ಮಹಾನಿರ್ದೇಶಕರು ಅಭಯ್ ಕುಮಾರ್ ನೆರೆದಿರುವವರಿಗೆ ಪ್ರದರ್ಶಿಸಿದರು.
UTIKS ಸಂಚಿಕೆಗಳು – ‘ಭಾರತದ ವಾಸ್ತುಶಿಲ್ಪ’, ‘ಭಾರತದಲ್ಲಿ ಪಾಕಶಾಸ್ತ್ರ ‘, ‘ಭಾರತೀಯ ಉಡುಪುಗಳು’, ‘ಭಾರತೀಯ ಚಿತ್ರರಂಗದ ಪರಿಚಯ’ ಮತ್ತು ‘ರಾಮಾಯಣ ಮತ್ತು ಮಹಾಭಾರತ’ವನ್ನು ಪ್ರಸ್ತುತಪಡಿಸಲಾಯಿತು
ಈ ಆನ್‌ಲೈನ್ ಪ್ಲಾಟ್‌ಫಾರ್ಮ್ ಅನ್ನು ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಹಾಗು ಇದರ ಮೂಲಕ, ಸಾಂಪ್ರದಾಯಿಕ ಭಾರತೀಯ ಜ್ಞಾನ ವ್ಯವಸ್ಥೆಯ ಅಡಿಯಲ್ಲಿ ಹಲವಾರು ವಿಷಯಗಳ ಬಗ್ಗೆ ಪರಿಚಯಾತ್ಮಕ ಮಟ್ಟದ ಅಲ್ಪಾವಧಿಯ ಅಧ್ಯಯನದ ಕೋರ್ಸ್‌ಗಳನ್ನು ಇದು ಒದಗಿಸುತ್ತದೆ . ಪೋರ್ಟಲ್ ಭಾರತೀಯ ಸಂಸ್ಕೃತಿಯ ಬಗ್ಗೆ ಜ್ಞಾನ ಮತ್ತು ಅಧಿಕೃತ ಮಾಹಿತಿಯನ್ನು ಪ್ರಸಾರ ಮಾಡುವ ಗುರಿಯನ್ನು ಹೊಂದಿದೆ
ಜೊತೆಗೆ ಈಗಾಗಲೇ ಮೂಲಭೂತ ತಿಳುವಳಿಕೆಯನ್ನು ಹೊಂದಿರಬಹುದಾದ ಆದರೆ ವೈವಿಧ್ಯಮಯ ವಿಷಯಗಳ ಆಳವಾದ ಮೆಚ್ಚುಗೆಯನ್ನು ಹುಡುಕುತ್ತಿರುವವರಿಗೆ ಸೂಕ್ಷ್ಮವಾದ ರೀತಿಯಲ್ಲಿ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುತ್ತದೆ.
UTIKS, ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ICCR) ನ ಉಪಕ್ರಮವಾಗಿದ್ದು, ಭಾರತೀಯ ಸಂಸ್ಕೃತಿಯನ್ನು ಜಾಗತಿಕ ಪ್ರೇಕ್ಷಕರಿಗೆ ಕೊಂಡೊಯ್ಯಲು ಮತ್ತು ಅದರ ಶ್ರೀಮಂತ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಕಲಿಯುವವರಿಗೆ ಸ್ನೇಹಿಯಾಗಿ ಪ್ರಸ್ತುತಪಡಿಸಲು ವಿನ್ಯಾಸಗೊಳಿಸಲಾದ ಇ-ಲರ್ನಿಂಗ್ ವೇದಿಕೆಯಾಗಿದೆ.
UTIKS ದೂರಶಿಕ್ಷಣ ಕ್ರಮದಲ್ಲಿ ಆನ್‌ಲೈನ್ ಕೋರ್ಸ್‌ಗಳಿಗೆ ಸಮಗ್ರ ವೇದಿಕೆ ಮತ್ತು ಪೋರ್ಟಲ್ ಅನ್ನು ಒದಗಿಸುತ್ತದೆ, ಕಂಪ್ಯೂಟರ್, ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳ ಮೂಲಕ ವಿವಿಧ ಸಾಧನಗಳಲ್ಲಿ ಇದನ್ನು ಉಪಯೋಗಿಸಬಹುದು.
ಇದು ವಿದೇಶಿಗರಿಗೆ ಮಾತ್ರವಲ್ಲದೇ, ನಮ್ಮ ಸಂಸ್ಕೃತಿಯ ಆಳ ಮತ್ತು ಶ್ರೀಮಂತಿಕೆಯ ಬಗ್ಗೆ ತಿಳಿದಿರದ, ಭಾರತದಲ್ಲಿ ನೆಲೆಸಿರುವವರೂ ಸೇರಿದಂತೆ ಪ್ರತಿಯೊಬ್ಬರೂ ಇದರ ಉಪಯೋಗ ಪಡೆಯಬಹುದು.
UTIKS ರಚನೆಗೆ ಪಾಲುದಾರರಾಗಿ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯವು UTIKS ಸಂಚಿಕೆಗಳಿಗೆ ಶೈಕ್ಷಣಿಕ ಚೌಕಟ್ಟನ್ನು ಒದಗಿಸುವ ಮೂಲಕ ಕೊಡುಗೆ ನೀಡಿದೆ. ಪ್ರತಿ UTIKS ಸಂಚಿಕೆಯಲ್ಲಿ ಸಂಘಟಿತ ದೃಶ್ಯ ಮತ್ತು ಧ್ವನಿ ಮುದ್ರಿತ ಚಿತ್ರಗಳು, ಸಂದರ್ಶನಗಳು ಮತ್ತು ಪ್ರದರ್ಶನಗಳನ್ನು ಒಳಗೊಂಡಂತೆ 30-ನಿಮಿಷಗಳ ವೀಡಿಯೊ ವಿಭಾಗವನ್ನು ಒಳಗೊಂಡಿದೆ.
ವೈವಿಧ್ಯಮಯ ವಿಷಯಗಳ ಮೇಲೆ ಹೆಚ್ಚಿನ UTIKS ಸಂಚಿಕೆಗಳು ತಯಾರಿಯ ವಿವಿಧ ಹಂತಗಳಲ್ಲಿವೆ ಮತ್ತು ಶೀಘ್ರದಲ್ಲೇ ಆನ್‌ಲೈನ್‌ನಲ್ಲಿ ಲಭ್ಯವಿರುತ್ತವೆ.
ಪ್ರಸ್ತುತ UTIKS ಪ್ಲಾಟ್‌ಫಾರ್ಮ್ ಜೊತೆಗೆ ಏಳು ಹೆಚ್ಚುವರಿ ಸಂಚಿಕೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಾಗಲಿದೆ.