ಕೇರಳ :ಚಿತ್ರನಟಿ, ಬಿಜೆಪಿ ನಾಯಕಿ , ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಅವರನ್ನು ಕೇರಳದ ವಿಷ್ಣುಮಾಯಾ ದೇವಸ್ಥಾನಕ್ಕೆ ಆಹ್ವಾನಿಸಿ ಪಾದಪೂಜೆ ನೆರವೇರಿಸಿದ್ದಾರೆ ಪೂಜಾರಿಗಳು.ಖುಷ್ಬುಗೆ ಅರ್ಚಕರು ಪೂಜೆ ಮಾಡಿರುವ ಚಿತ್ರಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕೇರಳದ ತ್ರಿಶೂರ್‌ನ ವಿಷ್ಣುಮಾಯಾ ದೇವಸ್ಥಾನದಲ್ಲಿ ಖುಷ್ಬೂ ಅವರಿಗೆ ಸುಹಾಸಿನಿ ಪೂಜಾ ಎಂದು ಕರೆಯಲಾಗುವ ನಾರಿ ಪೂಜೆಯನ್ನು ಇತ್ತೀಚೆಗೆ ನೆರವೇರಿಸಿರುವುದು ಗಮನ ಸೆಳೆದಿದೆ.
ಈ ದೇವಸ್ಥಾನದ ಆಚರಣೆಗಳ ಪ್ರಕಾರ ಪ್ರತಿ ವರ್ಷ ಒಬ್ಬ ಮಹಿಳೆಯನ್ನು ಆಮಂತ್ರಿಸಿ ಶಾಸ್ತ್ರೋಕ್ತವಾಗಿ ಪಾದಪೂಜೆ ಮಾಡಿ ವಿಧಿವಿಧಾನ ನೆರವೇರಿಸಲಾಗುತ್ತದೆ. ಪೂಜಾರಿಗಳು ಮಹಿಳೆಯನ್ನು ದೇವತೆಗೆ ಹೋಲಿಸಿ ಪೂಜೆ ಮಾಡುವುದು ಇಲ್ಲಿ ವಿಶೇಷ. ಈ ವೇಳೆ ಪೂಜಾರಿಗಳು ಖುಷ್ಬೂ ಅವರ ಪಾದಪೂಜೆ ಮಾಡಿ, ಮಾಲೆ ಹಾಕಿ ರೇಷ್ಮೆ ವಸ್ತ್ರಗಳನ್ನು ಅರ್ಪಿಸಿದ್ದಾರೆ.
ಪೂಜೆಯಲ್ಲಿ ಮಹಿಳೆಯರಿಗೆ ರೇಷ್ಮೆ ವಸ್ತ್ರಗಳನ್ನು ನೀಡುವುದರ ಜೊತೆ ಪಾದ ಪೂಜೆ ಮಾಡಿ, ಕೊರಳಿಗೆ ಹಾರ ಹಾಕಲಾಗುತ್ತದೆ. ಹೀಗೆ ಮಾಡಿದರೆ ಸ್ವರ್ಗದಿಂದಲೇ ದೇವತೆಯು ಧರೆಗೆ ಬಂದು, ಪಾದ ಪೂಜೆ ಮಾಡಿಸಿಕೊಳ್ಳುತ್ತಾಳೆ ಎನ್ನುವುದು ಅಲ್ಲಿನ ನಂಬಿಕೆ ಈ ವಿಷಯವನ್ನು ಸ್ವತಃ ಖುಷ್ಭೂ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಂತಹ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ, ಶಾಂತಿ ನೆಲೆಸಲು ನಾನು ನಿರಂತರವಾಗಿ ಶ್ರಮಿಸುವೆ ಎಂದೆಲ್ಲ ಅವರು ಬರೆದುಕೊಂಡಿದ್ದಾರೆ
https://x.com/khushsundar/status/1709029301197361581?s=20