ಉಡುಪಿ, ಅ.3: ಭಾರತೀಯ ಪಾಕ ಪದ್ಧತಿಯನ್ನು ಜಗತ್ತಿಗೆ ತೋರಿಸಲು ಭಾರತೀಯ ಪಾಕಪದ್ಧತಿಯನ್ನು ಇನ್ನಷ್ಟು ಜನ ಪ್ರಿಯಗೊಳಿಸಬೇಕಾದ ಅಗತ್ಯವಿದೆ ಎಂದು ಅಂತಾರಾಷ್ಟ್ರೀಯ ಬಾಣಸಿಗ ವಿಕಾಸ್ ಖನ್ನಾ ಹೇಳಿದ್ದಾರೆ.
ಅವರು ಮಣಿಪಾಲದ ವೆಲ್‌ಕಮ್ ಗ್ರೂಪ್ ಗ್ರಾಜುಯೇಟ್ ಸ್ಕೂಲ್ ಆಫ್ ಹೊಟೇಲ್ ಆಡ್ಮಿನಿಸ್ಟ್ರೇಷನ್(ವ್ಯಾಗ್ಷ)ದಲ್ಲಿ ಹಮ್ಮಿ ಕೊಳ್ಳಲಾದ ಭಾರತೀಯ ಪಾಕ ಮತ್ತು ಆಹಾರ ಸಂಸ್ಕೃತಿಯ ಕೇಂದ್ರದ ಉದ್ಘಾಟನೆಯಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ವಾಗ್ಷದ ಪ್ರಾಂಶುಪಾಲ ಚೆಫ್ ಕೆ.ತಿರುಜ್ಞಾನ ಸಂಬಂಧಮ್ ಹಾಜರಿದ್ದರು.
ಭಾರತವು ಬಹು ಸಂಸ್ಕೃತಿ ಮತ್ತು ಪರಂಪರೆಯ ದೇಶವಾಗಿದೆ. ಭಾರತೀಯ ಪಾಕ ಪದ್ದತಿಯು ಇದರ ಅವಿಭಾಜ್ಯ ಅಂಗವೇ ಆಗಿದೆ. ವಿಷ್ಠು ಪುರಾಣದಲ್ಲಿ ಉಕ್ತವಾಗಿರುವ ‘ಉತ್ತರಮ್ ಯತ್ ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ, ವರ್ಷಂ ತದ್ ಭಾರತಮ್ ನಮಭಾರತೀಯತ್ರ ಸಂತತಿಃ’ ಅಂದರೆ, ಸಾಗರದಿಂದ ಉತ್ತರದವರೆಗೆ, ಹಿಮವತ್ಪರ್ವತದಿಂದ ದಕ್ಷಿಣದವರೆಗೆ ಹರಡಿರುವ ಭೂಭಾಗವೇ ಭವ್ಯವಾದ ಭಾರತ, ಅಲ್ಲಿರುವವರೇ ಭಾರತೀಯರು – ಈ ಸಾಲು ಭಾರತೀಯ ಪರಂಪರೆಯ ಅಗಾಧತೆಯನ್ನು ಪ್ರತಿಫಲಿಸುವಂತಿದೆ.
ಭವ್ಯವಾದ ಹಿಮಾಲಯ ಶಿಖರಗಳಿಂದ ದಕ್ಷಿಣದ ದಟ್ಟವಾದ ಮಳೆಕಾಡುಗಳವರೆಗೆ ಸುಮಾರು 32,87,263 ಚದರ ಕಿ. ಮೀ. ವಿಸ್ತೀರ್ಣ ಹರಡಿರುವ ಭೂಭಾಗವು ಸಮೃದ್ಧವಾದ ಸಾಮ್ರಾಜ್ಯ, ಪರಾಕ್ರಮಿಗಳಾದ ರಾಜರು ಮತ್ತು ಸುಂದರವಾದ ಇತಿಹಾಸವನ್ನು ಒಳಗೊಂಡಿದೆ. ‘ಭಾರತದಲ್ಲಿ, “ನಮ್ಮ ಆಹಾರ ನಾವು ಯಾರು,” ಎಂಬುದನ್ನು ಸೂಚಿಸುತ್ತದೆ . ಭಾರತೀಯ ಪಾಕಪದ್ಧತಿ ಒಂದು ಕಲಾಕೃತಿ ಇದ್ದಂತೆ. ಭಾರತದಲ್ಲಿ ಬೆಳೆಯುವ ಸಂಬಾರಪದಾರ್ಥಗಳು, ಅಕ್ಕಿ, ಜೋಳ ಸೇರಿದಂತೆ ಆಹಾರಧಾನ್ಯಗಳು, ವೈವಿಧ್ಯಮಯವಾದ ತರಕಾರಿ-ಹಣ್ಣುಹಂಪಲುಗಳು- ಹೀಗೆ ವರ್ಣವೈವಿಧ್ಯಗಳು ಪಾಕವೆಂಬ ಕಲಾಕೃತಿಯ ಸೌಂದರ್ಯವನ್ನು ಹೆಚ್ಚಿಸಿವೆ.
ವೆಲ್‌ಕಾಮ್‌ಗ್ರೂಪ್ ಗ್ರಾಜುಯೇಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್ (WGSHA), ಡಾ ಟಿಎಂಎ ಪೈ ಫೌಂಡೇಶನ್‌ನ ಘಟಕವಾದ ಮಾ