ಉಡುಪಿ : ಅಕ್ಟೋಬರ್ 04:ದ್ರಶ್ಯ ನ್ಯೂಸ್ :ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥರ ಚತುರ್ಥ ಪರ್ಯಾಯೊತ್ಸವದ ಸ್ವಾಗತ ಸಮಿತಿ ಅಕ್ಟೋಬರ್ 2. ರಂದು ವಿಶ್ವಕರ್ಮ ಸಮಾಜ ಬಾಂಧವರ ಸಭೆಯನ್ನು ನಡೆಸಿತು.
ಶ್ರಿ ಮಠದ ದಿವಾನರಾದ ಶ್ರಿ ನಾಗರಾಜ ಆಚಾರ್ಯರು ಪುತ್ತಿಗೆ ಪರ್ಯಾಯಕ್ಕೆ ತಮ್ಮ ವಿಶೇಷ ಸಹಕಾರವನ್ನು ಕೋರಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷರಾದ ಶ್ರಿ ಮಧು ಆಚಾರ್ಯ ಪುತ್ತಿಗೆ ಶ್ರೀಗಳವರ ವೈಭೋಪೇತ ಪರ್ಯಾಯಕ್ಕೆ ನಮ್ಮ ಇಡೀ ಸಮಾಜ ಸ್ವಾಗತ ಸಮಿತಿಯ ಪ್ರತಿಯೊಂದು ವಿಭಾಗದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಅಲ್ಲದೆ ಶ್ರೀಗಳವರ ಕೋಟಿ ಗೀತಾ ಲೇಖನ ಯಜ್ಞದಲ್ಲಿ ಕೂಡ ಗೀತಾ ಪ್ರಾಚಾರ ಮಾಡುವ ಮೂಲಕ ಶ್ರಿ ಕೃಷ್ಣ ಮುಖ್ಯಪ್ರಾಣ ಸೇವೆ ಮಾಡಲು ಬದ್ದರಿದ್ದೇವೆ. ಎಂದು ತಿಳಿಸಿದರು.
ಸಭೆಯಲ್ಲಿ ಸಮಾಜದ ಮುಖಂಡರುಗಳಾದ ಶ್ರೀ ಯೋಗೀಶ್ ಆಚಾರ್ಯ, ಶ್ರೀ ಶೇಖರ ಆಚಾರ್, ಶ್ರಿ ಜಿ. ಏ.ಆಚಾರ್,ಶ್ರಿದಾಮೋದರ್ ಆಚಾರ್ಯ, ಶ್ರೀ ಜಗದೀಶ್ ಆಚಾರ್ಯ,ಶ್ರೀ ಸುಧಾಕರ ಆಚಾರ್ಯ, ರವಿಚಂದ್ರ ಆಚಾರ್ಯ,ಶ್ರೀ ಕೇಶವ ಆಚಾರ್ಯ, ಯುವ ಸಂಘಟನೆಯ ಸುಧಾಕರ ಆಚಾರ್ಯ, ರವಿಚಂದ್ರ ಆಚಾರ್ಯ,ಶ್ರೀಮತಿ ಮುಕ್ತಾ ಜಗದೀಶ್, ಶ್ರೀಮತಿ ಸಂಧ್ಯಾ ಲಕ್ಷ್ಮಣ್ ಆಚಾರ್ಯ ಹಾಗೂ ಮೊದಲಾದ ಗಣ್ಯರು ಉಪಸ್ಥಿತರಿದ್ದರು .
ಶ್ರೀ ಮಠದ ರಮೇಶ್ ಭಟ್ ಕೆ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಮಹಿತೋಷ್ ಆಚಾರ್ಯರು ಧನ್ಯವಾದವಿತ್ತರು. ಸಮಿತಿಯ ಸದಸ್ಯರಾದ ಶ್ರೀ ಜಿ. ವಿ. ಆಚಾರ್ಯ, ಶ್ರಿ ವಿಷ್ಣುಮೂರ್ತಿ ಉಪಾಧ್ಯ, ಶ್ರಿ ರವೀಂದ್ರ ಆಚಾರ್ಯ,ಶ್ರಿ ಉಮೇಶ್ ಭಟ್, ಹಾಗೂ ಶ್ರೀ ರಘುಪತಿ ರಾವ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.