ಉಡುಪಿ :ಅಕ್ಟೋಬರ್ 03:ದ್ರಶ್ಯ ನ್ಯೂಸ್ :ಕಾಪು ತಾಲೂಕಿನ ಕುತ್ಯಾರು ಗ್ರಾಮ ಪಂಚಾಯತ್ ಉಡುಪಿ – ಮಣಿಪಾಲ ವ್ಯಾಪ್ತಿಯಲ್ಲಿ ಹುಚ್ಚುನಾಯಿ ಸಂಚರಿಸುತ್ತಿದ್ದು, ಕೆಲವು ನಾಯಿಗಳಿಗೆ ಕಚ್ಚಿದ್ದು ಗ್ರಾಮದಲ್ಲಿ ತುಂಬಾ ಆತಂಕವನ್ನು ಮೂಡಿಸಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಮನೆಯ ಸಾಕು ನಾಯಿಗಳನ್ನು ಕಡ್ಡಾಯವಾಗಿ ಮನೆಯಲ್ಲಿ ಕಟ್ಟಿ ಹಾಕಿ ಹಾಗೂ ಕಡ್ಡಾಯವಾಗಿ ರೇಬಿಸ್ ಇಂಜೆಕ್ಷನ್ ಅನ್ನು ತಕ್ಷಣವೇ ನೀಡಬೇಕಾಗಿ ಕುತ್ಯಾರು ಗ್ರಾಮ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ