ಮಂಗಳೂರು: ಅ.3 : ದೃಶ್ಯ ನ್ಯೂಸ್ : ನೂರಾರು ಜನರ ಪಾಲಿನ ಉದ್ಯೋಗ ದಾತ ಮಹೇಶ್ ಬಸ್ ಮಾಲಕ ಪ್ರಕಾಶ್ ಶೇಖ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮೃತದೇಹದ ಅಂತಿಮ ಯಾತ್ರೆ ನಿನ್ನೆ ನಡೆಯಿತು.
ಹೆಸರಾಂತ ಖಾಸಗಿ ಬಸ್ ಆದ ಮಹೇಶ್ ಟ್ರಾವೆಲ್ಸ್ ನ ಮಾಲಕ ಕದ್ರಿ ಕಂಬಳ ರಸ್ತೆಯ ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
ಖಾಸಗಿ ಬಸ್, ಟೂರಿಸ್ಟ್, ಲಾರಿ ಉದ್ಯಮದಲ್ಲಿ ಹೆಸರು ಮಾಡಿದ್ದ ಪ್ರಕಾಶ್ ಶೇಖ ನೂರಕ್ಕೂ ಅಧಿಕ ಬಸ್ಗಳನ್ನು ಹೊಂದಿದ್ದರು. ಇನ್ನು ಮಂಗಳೂರು, ಉಡುಪಿಯಲ್ಲಿ ಮಹೇಶ್ ಟ್ರಾವೆಲ್ಸ್ ಭಾರೀ ಪ್ರಸಿದ್ಧಿ ಗಳಿಸಿತ್ತು.
ಇಂದು ನಗರದ ಎ.ಜೆ.ಆಸ್ಪತ್ರೆಯಲ್ಲಿ ಪ್ರಕಾಶ್ ಶೇಖ ರವರ ಪಾರ್ಥಿವ ಶರೀರವನ್ನ ಪತ್ನಿ ನವ್ಯರವರಿಗೆ ಹಸ್ತಾಂತರಿಸಲಾಯಿತು. ಬಳಿಕ ಅವರದ್ದೇ ಮಹೇಶ್ ಬಸ್ ಗಳ ಮೆರವಣಿಗೆಯೊಂದಿಗೆ ಅವರ ಪಾರ್ಥಿವ ಶರೀರದ ಅಂತಿಮಯಾತ್ರೆ ನಡೆಯಿತು. ಇದೀಗ ಪ್ರಕಾಶ್ ಶೇಖ ರವರ ಅಂತಿಮಯಾತ್ರೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.