ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ 2022 23 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಕೋಡಿ ಗ್ರಾಮ ಪಂಚಾಯಿತಿಗೆ ದೊರಕಿದ್ದು ದಿನಾಂಕ02/10/2023 ರಂದು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಐಟಿ ಮತ್ತು ಬಿಟಿ ಸಚಿವರು ಶ್ರೀಯುತ ಪ್ರಿಯಾಂಕ ಖರ್ಗೆ ಇವರು ಗ್ರಾಮ ಪಂಚಾಯತ್ ಪರವಾಗಿ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ಪ್ರಭಾಕರ್ ಮೆಂಡನ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ರವೀಂದ್ರರಾವ್ ಅವರಿಗೆ ಬ್ಯಾಂಕ್ ವೇಟ್ ಹಾಲ್ ವಿಧಾನಸೌಧ ಇಲ್ಲಿ ಪ್ರಶಸ್ತಿ ಪ್ರಧಾನ ಮಾಡಿದರು.
ಗಾಂಧಿ ಗ್ರಾಮ ಪ್ರಶಸ್ತಿ ಚರಕದ ಸ್ಮರಣಿಕೆ, ಪ್ರಶಸ್ತಿ ಪತ್ರ ಹಾಗೂ ಪಂಚಾಯತ್ ಕಾಮಗಾರಿಗೆ 5 ಲಕ್ಷ ರೂಪಾಯಿ ಬಹುಮಾನ ಒಳಗೊಂಡಿದೆ. ಈ ಸಂದರ್ಭದಲ್ಲಿ ಶ್ರೀಮತಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಆಯುಕ್ತರು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಲಯ ಹಾಗೂ ಶ್ರೀಮತಿ ಉಮಾಮದೇವನ್ ಅಪರ ಮುಖ್ಯ ಕಾರ್ಯದರ್ಶಿಗಳು ಪಂಚಾಯತ್ ರಾಜ್ ಮೊದಲಾದವರು ಉಪಸ್ಥಿತರಿದ್ದರು