ಕಾರ್ಕಳ : ಅ.2: ಪಳ್ಳಿ ಗ್ರಾಮದ ಮುಟ್ಟಿಕಲ್ಲು ಎಂಬಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ಪೊಲೀಸರು ನಾಲ್ಕು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ದಾದಬೆಟ್ಟು ನಿವಾಸಿ ದಯಾನಂದ ನಾಯ್ಕ , ಪಳ್ಳಿ ಗ್ರಾಮದ ರಾಜೇಶ, ಮಾರಿಗುಡಿ ಬಳಿಯ ಇಂದ್ರಜಯ ಮತ್ತು ಅಣ್ಣು ಮುಗೇರ ಎಂಬವರು ಬಂದಿತ ಆರೋಪಿಗಳು.
ಬಂಧಿತರಿಂದ ಕೋಳಿ ಕಾಲಿಗೆ ಕಟ್ಟುವ ಬಾಲ್, ಎಂಟು ದ್ವಿಚಕ್ರ ವಾಹನ, 1010 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಕಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಬ್ರಹ್ಮಣ್ಯ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.