ಉಡುಪಿ :ಅಕ್ಟೋಬರ್ 02:ದ್ರಶ್ಯ ನ್ಯೂಸ್ :ಉಡುಪಿ ಹೆಲ್ಪ್ ಲೈನ್( ರಿ )(ಹಸಿದವರ ಬಾಳಿನ ಆಶಾಕಿರಣ) ತನ್ನ 6ನೇಯ ವರ್ಷದ ಪಾದಾರ್ಪಣೆಯ ಸಂಭ್ರಮವನ್ನು ಅಕ್ಟೋಬರ್ 01 ರ ರವಿವಾರ ಕಲ್ಯಾಣಪುರ ಗ್ರಾಮದ ಹೊನ್ನಪರಕುದ್ರು ಎಂಬಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬ ವೊಂದಕ್ಕೆ ಹೊಸಬಟ್ಟೆ, ಆಹಾರ ಸಾಮಗ್ರಿ,ಗೌರವ ಧನವನ್ನು ವಿತರಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಜು೯ನ್ ಭಂಡಾರ್ಕರ್, ಮಮತ ಪಿ ಶೆಟ್ಟಿ ತೆಂಕನಿಡಿಯೂರು ಶ್ರೀ ನಗರ,ರಮೇಶ್ ಎಸ್ ತಿಂಗಳಾಯ ಕೋಡಿಬೆಂಗ್ರೆ,ನವೀನ್ ಡಿಸೋಜ ಕಲ್ಯಾಣಪುರ, ಓಂ ಪ್ರಕಾಶ್ ಕೆಮ್ಮಣ್ಣು,ಭಾರತಿ ಟಿ. ಕೆ, ವಿನೋದ್ ಶೆಟ್ಟಿ ಉಡುಪಿ,ಭವಿಷ್ ಉಡುಪಿ,ವಿವೇಕ್ ಎಡಬೆಟ್ಟು, ಉಷಾ ಹೂಡೆ, ಪ್ರೀತಿ ಕಲ್ಯಾಣಪುರ, ಗೌರಿ ಸುಧಾಕರ್ ತೆಂಕನಿಡಿಯೂರು ಗ್ರಾಮ ಗರಡಿಮಜಲು, ವತ್ಸಲಾ ಕೋಟ್ಯಾನ್ ನೇಜಾರು, ಪ್ರತಿಮಾ ನಾಯಕ್ ಕೆಳಾಕಳ೯ಬೆಟ್ಟು,ಕುಸುಮ ಗುಜ್ಜರುಬೆಟ್ಟು, ಯಶೋಧ ಕೆಮ್ಮಣ್ಣು, ವತ್ಸಲಾ ವಿನೋದ್ ಗುಜ್ಜರುಬೆಟ್ಟು, ಆಶಾ ತಿಮ್ಮಣ್ಣಕುದ್ರು, ರಫೀಕ್ ಕಲ್ಯಾಣಪುರ, ಮಹೇಶ್ ಪೂಜಾರಿ ಹೂಡೆ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.