ಬೆಂಗಳೂರು :ಅಕ್ಟೋಬರ್01:ದ್ರಶ್ಯ ನ್ಯೂಸ್: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2023 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರ ಹೆಸರುಗಳನ್ನು ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್ ನಲ್ಲಿ ನಾಮನಿರ್ದೇಶನ ಮಾಡಬಹುದಾಗಿದೆ.
ಸೇವಾ ಸಿಂಧು ಪೋರ್ಟಲ್ ನ ವೆಬ್ಸೈಟ್ ವಿಳಾಸ:http://sevasindhu.karnataka.gov.inನಾಮನಿರ್ದೇಶನದ ಅವಧಿಯು ದಿನಾಂಕ:01-10- 2023ರಿಂದ ಪ್ರಾರಂಭವಾಗಿ ದಿನಾಂಕ 15-10-2023 ರಂದು ಕಡೆಯ ದಿನಾಂಕವಾಗಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.