ಸೆಪ್ಟೆಂಬರ್ 30:ದ್ರಶ್ಯ ನ್ಯೂಸ್ : ಶ್ರೀ ಪಲಿಮಾರು ಮಠದ ಹಿರಿಯ ಶ್ರೀಪಾದರಾದ ಶ್ರೀ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರ 45 ನೇ ಚಾತುರ್ಮಾಸ್ಯದ ಹಾಗೂ ಕಿರಿಯ ಶ್ರೀಪಾದರಾದ ಶ್ರೀ ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರ 5 ನೇ ಚಾತುರ್ಮಾಸ್ಯದ ಸೀಮೋಲ್ಲಂಘನವನ್ನು ಶುಕ್ರವಾರ ಶ್ರೀಕ್ಷೇತ್ರ ಕಂಚಿಯಲ್ಲಿ ನೆರೆವೇರಿಸಿದರು.
ಪ್ರಾತಃಕಾಲ ಶ್ರೀಮಠದ ಸಂಸ್ಥಾನ ಪೂಜಾದಿಗಳನ್ನು ನೆರೆವೇರಿಸಿ, ನಂತರ ಕಂಚಿಯ ಶ್ರೀವರದರಾಜನ ದೇಗುಲದ ಆಹ್ವಾನದಮೇರೆಗೆ ಅಲ್ಲಿಗೆ ತೆರಳಿ, ಕಂಚಿ ಕಾಮಾಕ್ಷಿ ದರ್ಶನವನ್ನು ಮಾಡಿ ನಂತರ ಶ್ರೀವರದರಾಜನ ದೇಗುಲದ ಸುತ್ತಲೂ ಛತ್ರ, ವಾದ್ಯ, ಸುಡುಮದ್ದು ಸಹಿತವಾಗಿ ಮೆರವಣಿಗೆಯ ಮೂಲಕ ದೇಗುಲಕ್ಕೆ ತೆರಳಿ ಶ್ರೀವರದರಾಜನ ದರ್ಶನ ಶ್ರೀಮಠದ ಉಭಯ ಶ್ರೀಗಳೂ ಮಾಡಿ, ಅಲ್ಲಿನ ಶ್ರೀವ್ಯಾಸರಾಜ ಮಠಕ್ಕೆ ತೆರಳಿ ಸಾಯಂಕಾಲದ ಪೂಜಾ ಕೈಂಕರ್ಯವನ್ನು ನೆರೆವೇರಿಸಿದರು.