ಉಳ್ಳಾಲ: ಸೆಪ್ಟೆಂಬರ್ 30: ದೃಶ್ಯ ನ್ಯೂಸ್ : ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪೊಲೀಸರು ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದು ಚಾಲಕನನ್ನು ಬಂಧಿಸಿದ್ದಾರೆ.
ಕುತ್ತಾರು ಸಮೀಪ ಲಾರಿಯನ್ನು ತಡೆಹಿಡಿದ ಪೊಲೀಸರು ಮಲಾರ್ ಅಕ್ಷರನಗರ ನಿವಾಸಿ ಖಲಂದರ್ ಶಾಫಿ (20) ವಶಕ್ಕೆ ಪಡೆದಿದ್ದಾರೆ
ಆರೋಪಿಯು ಈಚರ್ ಟಿಪ್ಪರ್ ಲಾರಿ ಮೂಲಕ ಅಕ್ರಮವಾಗಿ ಮರಳನ್ನು ಕಲ್ಲಾಪು ನದಿ ತೀರದಿಂದ ಕೊಣಾಜೆ ಕಡೆಗೆ ಸಾಗಾಟ ನಡೆಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಕುತ್ತಾರು ಸಮೀಪ ತಡೆ ಹಿಡಿದ ಉಳ್ಳಾಲ ಠಾಣಾಧಿಕಾರಿ ಎಚ್.ಎನ್ ಬಾಲಕೃಷ್ಣ ನೇತೃತ್ವದ ತಂಡ ಲಾರಿ, ಮರಳು ಸಮೇತ ಚಾಲಕನನ್ನು ವಶಕ್ಕೆ ಪಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.