ಮಲ್ಪೆ :ಸೆಪ್ಟೆಂಬರ್ 30: ಶುಕ್ರವಾರ ವಾಯುಭಾರ ಕುಸಿತದಿಂದಾಗಿ ಅರಬಿ ಸಮುದ್ರದಲ್ಲಿ ಚಂಡಮಾರುತ ಕಂಡು ಬಂದಿರುವುದರಿಂದ ಬಹುತೇಕ ಮೀನುಗಾರರು ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ದಡ ಸೇರಿದ್ದಾರೆ.
ಮಲ್ಪೆ ಬಂದರಿನಲ್ಲಿ ಇಲ್ಲಿಯ ಬೋಟುಗಳಲ್ಲದೆ ಹೊರಬಂದರಿನ ಬೋಟುಗಳು ಬಂದಿದ್ದರಿಂದ ಜಾಗದ ಕೊರತೆಯಿರುವುದರಿಂದ ಹೊಳೆಭಾಗದಲ್ಲಿ ದೋಣಿಯನ್ನು ಇರಿಸಲಾಗಿದೆ.
ಯಾಂತ್ರಿಕ ಮೀನುಗಾರಿಕೆ ಆರಂಭಗೊಂಡು 40 ದಿನಗಳಲ್ಲಿ ಪ್ರಾಕೃತಿಕ ವಿಕೋಪ ಕಂಡು ಬಂದಿರುವುದು ಮೀನುಗಾರಿಕೆಗೆ ಹೊಡೆತವಾಗಿದೆ.