ಮಂಗಳೂರು : ಸೆಪ್ಟೆಂಬರ್ 30: ದೃಶ್ಯ ನ್ಯೂಸ್: ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಮಂಗಳೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ ಅವರು ಆಯ್ಕೆಯಾಗಿದ್ದಾರೆ.
ಮಂಗಳೂರು ವಿಭಾಗದ ಉಪ ವಲಯ ಸಂರಕ್ಷಣಾ ಅಧಿಕಾರಿಯಾಗಿದ್ದ ಶ್ರೀಧರ್ ಪಿ ಅವರನ್ನು ಅರಣ್ಯ ರಕ್ಷಣೆ ಮತ್ತು ಅಭಿವೃದ್ಧಿ ವಿಭಾಗದ ಅತ್ಯುತ್ತಮ ಕಾರ್ಯಕ್ಕಾಗಿ 2021ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕಾಗಿ ಆಯ್ಕೆ ಮಾಡಲಾಗಿದೆ.
ಮೂಲತಃ ಬೈಂದೂರು ಪಡುವರಿಯವರಾದ ಇವರು, ಮಂಗಳೂರು ವಿಭಾಗದ ಅರಣ್ಯ ಸಂರಕ್ಷಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.