ಉಡುಪಿ :ಸೆಪ್ಟೆಂಬರ್ಭಾ 29:ದ್ರಶ್ಯ ನ್ಯೂಸ್:ಬಾವಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬೆಂಗಳೂರಿನ ಗೋವರ್ಧನ ಕ್ಷೇತ್ರದಲ್ಲಿ ತಮ್ಮ 50ನೇ ಚಾತುರ್ಮಾಸ್ಯ ವ್ರತ ಪೂರೈಸಿ ಶುಕ್ರವಾದ ಉಡುಪಿ ಕ್ಷೇತ್ರಕ್ಕೆ ಆಗಮಿಸಿದರು . ಶ್ರೀಕೃಷ್ಣ ಮುಖ್ಯಪ್ರಾಣ ಹಾಗೂ ಶ್ರೀ ಅನಂತೇಶ್ವರ ಮತ್ತು ಶ್ರೀ ಚಂದ್ರೇಶ್ವರ ದೇವರ ದರ್ಶನ ಪಡೆದು ಪುತ್ತಿಗೆ ಮಠಕ್ಕಾಗಮಿಸಿದರು.
ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ, ಪರ್ಯಾಯ ಪೂರ್ವ ತಯಾರಿ ಬಗ್ಗೆ ಚರ್ಚಿಸಿದರು ತಮ್ಮ ಚತುರ್ಧ ಪರ್ಯಾಯದ ವ್ಯವಸ್ಥೆ ಶಿಸ್ತುಬದ್ಧವಾಗಿ ನಡೆಸಿ, ಪರ್ಯಾಯ ಮಹೋತ್ಸವ ವೈಭವಯುತವಾಗಿ ನಡೆಯಲು ಸಹಕರಿಸುವಂತೆ ಸ್ವಾಗತ ಸಮಿತಿ ಪದಾಧಿಕಾರಿಗಳಿಗೆ ತಿಳಿಸಿದರು.
ಸಮಿತಿ ಅಧ್ಯಕ್ಷ ಡಾ. ಎಚ್. ಎಸ್ ಬಲ್ಲಾಳ್, ಕಾರ್ಯಾಧ್ಯಕ್ಷ ಕೆ.ರಘುಪತಿ ಭಟ್, ಸಮಿತಿ ಸದಸ್ಯರಾದ ಉಮೇಶ್ ಭಟ್,ರವೀಂದ್ರ ಆಚಾರ್ಯ, ಚೈತನ್ಯ ಎಂ. ಜಿ. ಮತ್ತು ನಾಗರಾಜ್ಐತಾಳ್ ಹಾಗೂ ಶ್ರೀಮಠದ ಶ್ರೀ ನಾಗರಾಜ ಆಚಾರ್ಯ, ಪ್ರಸನ್ನಆಚಾರ್ಯ, ವಿಷ್ಣು ಮೂರ್ತಿ ಉಪಾಧ್ಯ, ರಮೇಶ್ ಭಟ್ ಕೆ,ಸುಧೀಂದ್ರ ಆಚಾರ್ಯ ಮತ್ತು ಸತ್ಯನಾರಾಯಣ ಭಟ್,ಸಂತೋಷ್ ಪಿ. ಶೆಟ್ಟಿ ಶಂಕರಗುತ್ತು ಮೊದಲಾದವರಿದ್ದರು.