ಉಡುಪಿ ಸೆ 29: ಉಡುಪಿ ಕಿನ್ನಿಮುಲ್ಕಿ ಪರಿಸರದಲ್ಲಿ ಕಳೆದ 10 ದಿನಗಳ ಹಿಂದೆ ಸಾರ್ವಜನಿಕರಿಗೆ ಹಲ್ಲೆ ಹಾಗೂ ಭಯದ ವಾತಾವರಣ ಸೃಷ್ಟಿಸಿದ ವ್ಯಕ್ತಿಯನ್ನು ವಿಶು ಶೆಟ್ಟಿಯವರು ವಶಕ್ಕೆ ಪಡೆದು ಬಾಳಿಗ ಆಸ್ಪತ್ರೆಗೆ ದಾಖಲಿಸಿದ್ದು ಇದೀಗ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸಿದ್ದು ತನ್ನ ಹೆಸರು ಜಗನಾಥ ಶೆಟ್ಟಿ ಮಂಗಳೂರಿನ ತೊಕ್ಕೊಟ್ಟು, ಚೊಂಬುಗುಡ್ಡೆ ಸ್ಮಶಾನದ ಬಳಿ ಮನೆ ಪತ್ನಿ ಹೆಸರು ಉಷಾ ಶೆಟ್ಟಿ ರಾಕೇಶ್ ಶೆಟ್ಟಿ ಮಗ ಎಂದು ಹೇಳಿಕೆ ನೀಡಿದ್ದಾರೆ.
ಸಂಬಂಧಿಕರು ಅಥವಾ ಸಂಬಂಧಪಟ್ಟವರು ಬಾಳಿಗ ಆಸ್ಪತ್ರೆ ಅಥವಾ ನಗರ ಠಾಣೆಯನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿಯವರು ವಿನಂತಿಸಿದ್ದಾರೆ.