ಮಣಿಪಾಲ, 29 ಸೆಪ್ಟೆಂಬರ್ 2023:ದ್ರಶ್ಯ ನ್ಯೂಸ್ :ಇಂದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ ಅವಿನಾಶ್ ಶೆಟ್ಟಿ ಜಂಟಿಯಾಗಿ ಹೃದಯ ಆರೋಗ್ಯ ಜಾಗೃತಿ ಕಲಾ ಶಿಲ್ಪ ಅನಾವರಣಗೊಳಿಸಿದರು . ಈ ಸಂದರ್ಭದಲ್ಲಿ ಮಾತನಾಡಿದ ಡಾ ಅವಿನಾಶ ಶೆಟ್ಟಿ ಅವರು ಹೃದಯ ಆರೋಗ್ಯ ಕಾಪಾಡುವಲ್ಲಿ ಸಮತೋಲಿತ ಆಹಾರ ಮತ್ತು ನಿತ್ಯ ವ್ಯಾಯಾಮದ ಮಹತ್ವವನ್ನು ತಿಳಿಸಿದರು . ಈ ಸಂದರ್ಭದಲ್ಲಿ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ ಪದ್ಮಕುಮಾರ್ , ಹೃದ್ರೋಗ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಗಣೇಶ್ ಕಾಮತ್, ಡಾ ಗುರುಪ್ರಸಾದ್ ರೈ , ಡಾ ಕೀರ್ತಿನಾಥ ಬಲ್ಲಾಳ, , ಶ್ರೀ ಸಚಿನ್ ಕಾರಂತ್ ಮತ್ತು ಶ್ರೀ ಮೋಹನ್ ಶೆಟ್ಟಿ ಉಪಸ್ಥಿತರಿದ್ದರು . ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಪರಿಸರ ಸ್ನೇಹಿ ವಸ್ತುಗಳಿಂದ ಶಿಲ್ಪವನ್ನು ತಯಾರಿಸಿದ್ದರು. ಶ್ರೀ ಕೃಷ್ಣಪ್ರಸಾದ್ ಕಾರ್ಯಕ್ರಮ ನಿರ್ವಯಿಸಿದರು