ಕುಂದಾಪುರ : ಸೆ.29: ದೃಶ್ಯ ನ್ಯೂಸ್ : ನಾಲ್ಕುರು ಕಜ್ಕೆ ವಿಶ್ವಕರ್ಮ ಮಠಕ್ಕೆ ಕುಂದಾಪುರ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ಭೇಟಿ ನೀಡಿ ಅನಂತ ಶ್ರೀ ವಿಭೂಷಿತ ಶಿವ ಸುಜ್ಞಾನ ತೀರ್ಥ ಮಹಾ ಸ್ವಾಮಿಜಿಯವರ 41ನೇ ಚಾತುರ್ಮಾಸ್ಯ ವ್ರತದ ಆಚರಣೆಯಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಸನಾತನ ಧರ್ಮದಲ್ಲಿ ಚಾತುರ್ಮಾಸ್ಯಕ್ಕೆ ತುಂಬಾನೇ ಮಹತ್ವವಿದೆ. ಈ ಚಾತುರ್ಮಾಸವು ದೇವಶಯನಿ ಏಕಾದಶಿಯಂದು ಪ್ರಾರಂಭವಾಗುವುದು. ಆಷಾಢಮಾಸದ ಹುಣ್ಣಿಮೆಯಿಂದ ಕಾರ್ತಿಕ ಮಾಸದ ಹುಣ್ಣಿಮೆಯವರಿಗೆ ನಾಲ್ಕು ತಿಂಗಳು ತುಂಬಾ ಮಹತ್ವವಾಗಿದೆ ಎಂದರು. ಬಳಿಕ ಸ್ವಾಮೀಜಿಯವರಿಂದ ಆಶೀರ್ವಾದವನ್ನು ಪಡೆದು ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.