ಉಡುಪಿ:ಸೆಪ್ಟೆಂಬರ್ 29:ದ್ರಶ್ಯ ನ್ಯೂಸ್:ಟೀಮ್ ನೇಶನ್ ಫಸ್ಟ್ (ರಿ.) ಉಡುಪಿ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇವರು ಭಾರತೀಯ ಸೇನೆಗೆ ಸೇರಲು ಆಸಕ್ತಿ ಇರುವ ಯುವಕ – ಯುವತಿಯರಿಗಾಗಿ ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ 20 ದಿನಗಳ “ಅಗ್ನಿಸೇತು -2023” ಶಿಬಿರದ ಸಮಾರೋಪ ಸಮಾರಂಭ ಡಾ ಜಿ ಶಂಕರ್ ಪ್ರಥಮ ದರ್ಜೆ ಮಹಿಳಾ ಕಾಲೇಜು ಅಜ್ಜರಕಾಡು ಉಡುಪಿ ಇಲ್ಲಿ ನಡೆಯಿತು
ಈ ಸಮಾರೋಪ ಸಮಾರಂಭದಲ್ಲಿ ಮಣಿಪಾಲ ಮಾಹೆಯ ಉಪ ಕುಲಪತಿ ಪ್ರೊ ಎಚ್ ಎಸ್ ಬಲ್ಲಾಳ್, ಲೆಫ್ಟಿನೆಂಟ್ ಜನರಲ್ ಎಂ. ಡಿ. ವೆಂಕಟೇಶ್ ಉಪಸ್ಥಿತರಿದ್ದರು