ಉಡುಪಿ: ಸೆಪ್ಟೆಂಬರ್ 28: ದೃಶ್ಯ ನ್ಯೂಸ್ : ಉಡುಪಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ಲಿ.) ಉಡುಪಿ ಇದರ ಅಧ್ಯಕ್ಷರಾಗಿ ಅಲೆವೂರು ಹರೀಶ್ ಕಿಣಿ, ಉಪಾಧ್ಯಕ್ಷರಾಗಿ ಮಹೇಶ್ ಅಂಚನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಶೇಖರ್ ಪಾಲನ್, ವಿನ್ಸೆಂಟ್ ಸಾಲ್ದಾನಾ, ರಮೇಶ್ ಪೂಜಾರಿ, ಸುಕುಮಾರ್ ಗುಜರನ್, ವಿದ್ಯಾ ದಿನಕರ, ಸುನೀತಾ ಮದುಸೂದನ್, ವೈಷ್ಣವಿ ವಿ. ನಾಯಕ್, ಸುರೇಶ್ ಪಾಲನ್, ರಾಜೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಸಹಕಾರ ಅಭಿವೃದ್ಧಿ ಅಧಿಕಾರಿ ರೋಹಿತ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಕಾರ್ಯನಿರ್ವಾಹಕ ಜಗದೀಶ್ ಅಮೀನ್ ಸಹಕರಿಸಿದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಮಧುಸೂದನ್ ಹೇರೂರು ಹಾರ ಹಾಕಿ ಅಭಿನಂಧಿಸಿದರು.