ಉಡುಪಿ: ದೃಶ್ಯ ನ್ಯೂಸ್ : ಸೆಪ್ಟೆಂಬರ್ 28: ಸರ್ವಿಸ್ ಬಸ್ ನಿಲ್ದಾಣದ ಬಳಿ ಹಾಗೂ ಕೃಷ್ಣ ಮಠದ ರಾಜಾಂಗಣದಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಸುಮಾರು ಒಂದು ತಿಂಗಳ ಹಿಂದೆ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಫಲಕಾರಿಯಾಗದೆ ಇಬ್ಬರೂ ಅನಾಥರು ಕೂಡ ಮೃತಪಟ್ಟಿದ್ದರು.
ಮೃತ ವ್ಯಕ್ತಿಗಳ ಮೃತದೇಹವನ್ನು ಸಂಬಂಧಿಕರ ಬರುವಿಕೆಗಾಗಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿ ಇಡಲಾಗಿತ್ತು. ಮಾಧ್ಯಮದ ಮೂಲಕ ಪ್ರಕಟಣೆ ನೀಡಿ ತಿಳಿಯ ಪಡಿಸಲಾಗಿತ್ತು. ವಾರಾಸು ಬಾರದೆ ಇದ್ದ ಕಾರಣ ಮೃತ ದೇಹವನ್ನು ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ಜಿಲ್ಲಾ ಪೊಲೀಸ್ ಹಾಗೂ ಸಮಾಜ ಸೇವಕ ಒಳಕಾಡುರವರ ಅವರ ನೇತ್ರತ್ವದಲ್ಲಿ ದಫನ ಮಾಡಲಾಯಿತು. ಈ ಪುಣ್ಯದ ಕೆಲಸದಲ್ಲಿ ಹೊಸಬೆಳಕು ಆಶ್ರಮದ ಸಂಚಾಲಕಿ ತನುಲಾ ತರುಣ್, ಫ್ಲವರ್ ವಿಷ್ಣು, ವಿಕಾಸ್ ಶೆಟ್ಟಿ, ಪ್ರದೀಪ್, ಅಣ್ಣಪ್ಪ ಪೂಜಾರಿ ಕರಂಬಳ್ಳಿ, ಉಡುಪಿ ನಗರ ಸಭೆ ಹಾಗೂ ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳು ಸಹಕರಿಸಿದರು.
ನಗರ ಪೊಲೀಸ್ ಠಾಣೆಯ ಎ ಎಸ್ ಐ ಅರುಣ್ ಹಂಗಾರಕಟ್ಟೆ, ಹೆಡ್ ಕಾನ್ಸ್ಟೇಬಲ್ ಮಾಳ, ಹರೀಶ್, ಜಾಸ್ಮ ಕಾನೂನು ಪ್ರಕ್ರಿಯೆ ನಡೆಸಿದರು.