ಹೆಬ್ರಿ : ಸೆಪ್ಟೆಂಬರ್ 27: ದೃಶ್ಯ ನ್ಯೂಸ್ : ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರ ತಣ್ಣೀರು ಶ್ರೀನಿವಾಸ ಆಚಾರ್ಯ ಮತ್ತು ತಣ್ಣೀರು ಉದಯ ಆಚಾರ್ಯ ಅವರ ಅಡಿಕೆ ತೋಟಕ್ಕೆ ನಿನ್ನೆ ರಾತ್ರಿ ಕಾಡಾನೆ ದಾಳಿ ನಡೆಸಿದ ಘಟನೆ ಸಂಭವಿಸಿದೆ.
ಕಾಡಾನೆ ದಾಳಿ ನಡೆಸಿ ಸುಮಾರು ಮೂವತ್ತಕ್ಕೂ ಅಧಿಕ ಅಡಿಕೆ ಮರಗಳನ್ನು ಪುಡಿಗಟ್ಟಿದ್ದು, ಇದರಿಂದ ಅಪಾರ ಹಾನಿ ಹಾಗೂ ನಷ್ಟ ಸಂಭವಿಸಿದೆ.
ಅರಣ್ಯಾಧಿಕಾರಿಗಳು ಹಾನಿಯ ಕುರಿತು ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು. ಹಾಗೂ ಆನೆಯನ್ನು ಹಿಡಿದು ದೂರದ ಪ್ರದೇಶಕ್ಕೆ ಸಾಗಿಸಬೇಕು. ಎಂದು ಸ್ಥಳೀಯರಾದ ಕೃಷಿಕ ತಣ್ಣೀರು ಉದಯ ಆಚಾರ್ಯ ಸರಕಾರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.