ಮಣಿಪಾಲ , 26 ಸೆಪ್ಟೆಂಬರ್ 2023:ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ (MCHP), ಮಾಹೆ ಮಣಿಪಾಲದ, ಉಸಿರಾಟದ ಚಿಕಿತ್ಸೆ ವಿಭಾಗವು ಶ್ವಾಸಕೋಶದ ಆರೋಗ್ಯ ಮತ್ತು ಉಸಿರಾಟದ ಆರೈಕೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ “ವಿಶ್ವ ಶ್ವಾಸಕೋಶ ದಿನ- 2023” ಅನ್ನು ಹೆಮ್ಮೆಯಿಂದ ಆಚರಿಸಿತು.
ಉದ್ಘಾಟನೆಯು ಸೆಪ್ಟೆಂಬರ್ 22, 2023 ರಂದು ನಡೆಯಿತು, ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಮಾಹೆ ಮಣಿಪಾಲದ ಸಹ ಕುಲಪತಿಗಳಾದ ( ಆರೋಗ್ಯ ವಿಜ್ಞಾನ ) ಡಾ. ಶರತ್ ರಾವ್, ಭಾಗವಹಿಸಿದ್ದರು; ಮತ್ತು ಕೆ ಎಂ ಸಿ ಮಣಿಪಾಲದ ಉಸಿರಾಟ ಔಷಧಿ ವಿಭಾಗದ ನಿಯೋಜಿತ ಮುಖ್ಯಸ್ಥರಾದ ಡಾ. ಮನು ಮೋಹನ್ ಕೆ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಎಂಸಿಎಚ್‌ಪಿಯ ಡೀನ್ ಡಾ. ಜಿ ಅರುಣ್ ಮೈಯ್ಯ ಅವರು ಗಣ್ಯರನ್ನು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಉಸಿರಾಟ ಚಿಕಿತ್ಸಾ ವಿಭಾಗದ ಪ್ರಭಾರಿ ಮುಖ್ಯಸ್ಥೆ ಶ್ರೀಮತಿ ಪ್ರತಿಭಾ ತೋಡೂರು ಕಾರ್ಯಕ್ರಮದ ಅವಲೋಕನ ನೀಡಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಡಾ. ಶರತ್ ಕುಮಾರ್ ರಾವ್ ಅವರು, ದೇಶದಲ್ಲಿ ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳನ್ನು ಎದುರಿಸಲು ಉಸಿರಾಟದ ಆರೈಕೆಯ ತುರ್ತು ಅಗತ್ಯತೆಯನ್ನು ಒತ್ತಿ ಹೇಳಿದರು. ಶ್ವಾಸಕೋಶದ ಕಾಯಿಲೆಗಳಿರುವ ರೋಗಿಗಳಿಗೆ ಆರೈಕೆಯನ್ನು ತಲುಪಿಸುವಲ್ಲಿ ಮತ್ತು ಆರೋಗ್ಯಕರ ಶ್ವಾಸಕೋಶವನ್ನು ಉತ್ತೇಜಿಸುವಲ್ಲಿ ಉಸಿರಾಟದ ಚಿಕಿತ್ಸಕರ ನಿರ್ಣಾಯಕ ಪಾತ್ರದ ಕುರಿತು ಡಾ. ಮನು ಮೋಹನ್ ಮಾತನಾಡಿದರು.
ಉದ್ಘಾಟನೆಯ ನಂತರ ನಡೆದ ನಿರಂತರ ವೈದ್ಯಕೀಯ ಶಿಕ್ಷಣ ಅಧಿವೇಶನ ಕಾರ್ಯಕ್ರಮದಲ್ಲಿ, ಶ್ರೀ ಬಿನೋಯ್ ಕೆ, ಉಸಿರಾಟ ಚಿಕಿತ್ಸಕ, ಕಿಮ್ಸ್, ತಿರುವನಂತಪುರಂ ಅವರು – ಸ್ಪಿರೋಮೆಟ್ರಿಯ ಮೌಲ್ಯಯುತ ಒಳನೋಟಗಳನ್ನು ಹಂಚಿಕೊಂಡರು. ಡಾ. ಮನು ಮೋಹನ್, ಪ್ರಾದ್ಯಾಪಕರು , ರೆಸ್ಪಿರೇಟರಿ ಮೆಡಿಸಿನ್, ಕೆಎಂಸಿ ಮಣಿಪಾಲ ಅವರು -ಸ್ಪಿರೋಮೆಟ್ರಿಯ ಸಮಯದಲ್ಲಿ ಆಗುವ ಅಪಾಯಗಳು ಕುರಿತು ವಿಷಯ ಮಂಡಿಸಿದರು. ಡಾ. ಲೆಸ್ಲಿ ಲೂಯಿಸ್, ಪ್ರಾದ್ಯಾಪಕರು ಮತ್ತು ಮುಖ್ಯಸ್ಥರು , ಮಕ್ಕಳ ವಿಭಾಗ , ಕೆ ಎಂ ಸಿ ಮಣಿಪಾಲ ಅವರು – ನವಜಾತ ಶಿಶುಗಳಲ್ಲಿ ಶ್ವಾಸಕೋಶದ ಗಾಯವನ್ನು ತಡೆಗಟ್ಟುವುದರ ಕುರಿತು ಮಾತನಾಡಿದರು. ಡಾ. ಸುನಿಲ್ ಆರ್, ಸಹ ಪ್ರಾದ್ಯಾಪಕರು , ಕ್ರಿಟಿಕಲ್ ಕೇರ್ ಮೆಡಿಸಿನ್, ಕೆ ಎಂ ಸಿ ಮಣಿಪಾಲ ಅವರು- ವೈಯಕ್ತಿಕಗೊಳಿಸಿದ ಮೆಕ್ಯಾನಿಕಲ್ ವೆಂಟಿಲೇಶನ್ ವಿಷಯದಲ್ಲಿ ಮಾತನಾಡಿದರು.
ವಿಶ್ವ ಶ್ವಾಸಕೋಶ ದಿನದ ಆಚರಣೆಯ ಭಾಗವಾಗಿ, ವಿಭಾಗವು ಸೆಪ್ಟೆಂಬರ್ 23, 2023 ರಂದು ಜಗತ್ತಿನಾದ್ಯಂತ ಏಳು ನಿಪುಣ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡ ವೆಬಿನಾರ್ ಅನ್ನು ಆಯೋಜಿಸಿತ್ತು . ಈ ಹಳೆಯ ವಿದ್ಯಾರ್ಥಿಗಳು , ವಿಭಾಗದ ಮಹತ್ವಾಕಾಂಕ್ಷೆಯ ಉಸಿರಾಟದ ಚಿಕಿತ್ಸಕರಿಗೆ ಅಮೂಲ್ಯವಾದ ವೃತ್ತಿ ದೃಷ್ಟಿಕೋನಗಳನ್ನು ಒದಗಿಸಿದರು. ಆಚರಣೆಯು ಕೇವಲ ಶೈಕ್ಷಣಿಕ ಅನ್ವೇಷಣೆಗಳಿಗೆ ಸೀಮಿತವಾಗಿರಲಿಲ್ಲ; ಇದು ವಿವಿಧ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಜೀವನವನ್ನು ಸಮೃದ್ಧಗೊಳಿಸುವ ಗುರಿಯನ್ನು ಹೊಂದಿದೆ. ಇವುಗಳಲ್ಲಿ ಮೈಮ್ ಪ್ರದರ್ಶನಗಳು, ಚಿತ್ರಕಲೆ ಮತ್ತು ವ್ಯಂಗ್ಯಚಿತ್ರ ಸ್ಪರ್ಧೆಗಳು, ಪೋಸ್ಟರ್ ಪ್ರಸ್ತುತಿಗಳು, ರಸಪ್ರಶ್ನೆಗಳು, 3D ಮಾದರಿಯ ಸ್ಥಾಪನೆ ಮತ್ತು ಸೃಜನಶೀಲ ರೀಲ್‌ಗಳು “ಎಲ್ಲರಿಗೂ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಪ್ರವೇಶ, ಯಾರನ್ನೂ ಹಿಂದೆ ಬಿಡಬೇಡಿ” ಎಂಬ ವಿಷಯದ ಸುತ್ತ ಕೇಂದ್ರೀಕೃತವಾಗಿತ್ತು. ಗಾಯನ ಮತ್ತು ನೃತ್ಯ ಸ್ಪರ್ಧೆಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ರೋಮಾಂಚಕ ಮತ್ತು ಸಂಭ್ರಮದ ವಾತಾವರಣವನ್ನು ಸೃಷ್ಟಿಸಿದವು.
ಸೆಪ್ಟೆಂಬರ್ 23 ರಂದು ಸಂಭ್ರಮಾಚರಣೆಯ ಸಮಾರೋಪ ನಡೆಯಿತು, ಮಾಹೆ ಮಣಿಪಾಲದ ಎಂಸಿಒಪಿಎಸ್‌ನ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ರಾವ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಮಾರಂಭವು ಬಹುಮಾನ ವಿತರಣಾ ಸಮಾರಂಭವನ್ನು ಒಳಗೊಂಡಿತ್ತು , ಇದು ಈ ಸ್ಪೂರ್ತಿದಾಯಕ ಮತ್ತು ಪ್ರತಿಭೆಯಿಂದ ತುಂಬಿದ ಆಚರಣೆಯ ಮುಕ್ತಾಯವನ್ನು ಸೂಚಿಸಿತು . ಎಂ ಸಿ ಎಚ್ ಪಿ , ಮಾಹೆ , ಮಣಿಪಾಲದಲ್ಲಿರುವ ಉಸಿರಾಟದ ಚಿಕಿತ್ಸಾ ವಿಭಾಗವು ವಿಶ್ವ ಶ್ವಾಸಕೋಶ ದಿನಾಚರಣೆಯ ಸಂದರ್ಭದಲ್ಲಿ ತನ್ನ ವಿದ್ಯಾರ್ಥಿಗಳ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಲು ಸಂತೋಷ ಪಡುತ್ತದೆ ಮತ್ತು ಶ್ವಾಸಕೋಶದ ಆರೋಗ್ಯ ಮತ್ತು ಉಸಿರಾಟದ ಆರೈಕೆಯನ್ನು ಆಚರಿಸಲು ಮತ್ತು ಉತ್ತೇಜಿಸಲು ಇಂತಹ ಹೆಚ್ಚಿನ ಅವಕಾಶಗಳನ್ನು ಎದುರು ನೋಡುತ್ತಿದೆ.