ಭಾರತದ ನೇಹಾ ಠಾಕೂರ್ ಪ್ರಸ್ತುತ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರಲ್ಲಿ ಬಾಲಕಿಯರ ಡಿಂಗಿ ILCA4 ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಇದು ನೌಕಾಯಾನದಲ್ಲಿ ಭಾರತದ ಮೊದಲ ಪದಕ ಮತ್ತು ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ ಒಟ್ಟಾರೆ 12 ನೇ ಪದಕವಾಗಿದೆ.
ಭೋಪಾಲ್‌ನ ನ್ಯಾಷನಲ್ ಸೈಲಿಂಗ್ ಸ್ಕೂಲ್‌ನಿಂದ ಹೊರಹೊಮ್ಮಿದ ನೇಹಾ, ಒಟ್ಟು 32 ಅಂಕಗಳೊಂದಿಗೆ ಮುಗಿಸುವ ಮೂಲಕ ತನ್ನ ಪರಾಕ್ರಮ ಪ್ರದರ್ಶಿಸಿದರು. 11 ರೇಸ್ಗಳಲ್ಲಿ ಒಟ್ಟು 27 ಅಂಕ ಗಳಿಸಿ ಬೆಳ್ಳಿ ಪದಕ ತಮ್ಮದಾಗಿಸಿದರು.
ಬಾಲಕಿಯರ ಡಿಂಗಿ ILCA-4 ವಿಭಾಗದಲ್ಲಿ 11 ಕಠಿಣ ರೇಸ್‌ಗಳು ಇದ್ದವು. ತೀವ್ರ ಪೈಪೋಟಿಯ ನಡುವೆಯೂ ಒಟ್ಟು 32 ಅಂಕಗಳನ್ನು ಕಲೆಹಾಕಿ ನೇಹಾ ಪ್ರಾಬಲ್ಯ ಮೆರೆದರು,