ಉಡುಪಿ :ಅ. 12ರಿಂದ 20ರವರೆಗೆ ಹೈದರಬಾದ್‌ನಲ್ಲಿ ನಡೆಯಲಿರುವ ಬಿಸಿಸಿಐ ಅಂಡರ್ 19 ವಿನೂ ಮಾಂಕಾಡ್ ಟ್ರೋಫಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ತಂಡಕ್ಕೆ ಉಡುಪಿಯ ನಿಶ್ಚಿತ್ ನಾಗರಾಜ್ ಪೈ ಆಯ್ಕೆಯಾಗಿದ್ದಾರೆ.
ಇವರು ಬೆಂಗಳೂರಿನ ಜೈನ್ ಯುನಿವರ್ಸಿಟಿಯ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದು, ಉಡುಪಿಯ ಕೆ. ನಾಗರಾಜ್ ಪೈ ಹಾಗೂ ಉಜ್ವಲ್ ಕಿರಣ್ ದಂಪತಿಯ ಪುತ್ರರಾಗಿದ್ದಾರೆ.