ಬೆಂಗಳೂರು ಬಂದ್ ಹಿನ್ನಲೆ ಮುನ್ನೆಚ್ವರಿಕೆ ಕ್ರಮವಾಗಿ ಗುಂಡ್ಲುಪೇಟೆ ತಾಲೂಕಿನ ಕರ್ನಾಟಕ-ತಮಿಳುನಾಡು ಗಡಿ ಕೆಕ್ಕನಹಳ್ಳ ಚೆಕ್ ಪೋಸ್ಟ್ ಮೂಲಕ ಸಂಚಾರ ಮಾಡುವ ಎಲ್ಲಾ ರೀತಿಯ ತಮಿಳುನಾಡು ವಾಹನ ಸಂಚಾರಕ್ಕೆ ಅಲ್ಲಿನ ಜಿಲ್ಲಾಡಳಿತ ನಿರ್ಬಂಧ ಹಾಕಿದ್ದು, ಗಡಿಗೆ ಬರುವ ತಮಿಳುನಾಡು ನೋಂದಣಿ ವಾಹನಗಳನ್ನು ವಾಪಸ್ ಕಳುಹಿಸಲಾಗುತ್ತಿದೆ
ಇಂದು ಬೆಳಗ್ಗೆ 6 ಗಂಟೆಯಿಂದ 8:30ರವರೆಗೆ ಕರ್ನಾಟಕ-ತಮಿಳುನಾಡಿನ ಗಡಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಮಾಹಿತಿ ಅರಿವಿಲ್ಲದೆ ಹಲವು ವಾಹನ ಸವಾರರು ಗುಂಡ್ಲುಪೇಟೆ ಮೂಲಕ ಕರ್ನಾಟಕದ ಗಡಿ ಕೆಕ್ಕನಹಳ್ಳಿ ಚೆಕ್ ಪೋಸ್ಟ್ ಗೆ ತೆರಳಿ ವಾಪಸ್ಸಾದರು.
ಪರಿಸ್ಥಿತಿ ಶಾಂತಿಯುತವಾಗಿರುವುದನ್ನು ತಿಳಿಸಿದ ಬಳಿಕ ಬೆಳಗ್ಗೆ 8.30ರ ಬಳಿಕ ಕರ್ನಾಟಕ ವಾಹನಗಳು ಸೇರಿದಂತೆ ಇತರ ರಾಜ್ಯದ ನೋಂದಣಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ,ತಮಿಳುನಾಡು ವಾಹನಗಳನ್ನು ಕರ್ನಾಟಕ ಪ್ರವೇಶಿಸಿಲು ನಿರ್ಬಂಧ ಮುಂದುವರೆಸಿದ್ದಾರೆ